ರವಿಶಾಸ್ತ್ರಿ, ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದಲ್ಲಿ ಆಡಲು ಯೋಯೋ ಪರೀಕ್ಷೆಯನ್ನು ಪಾಸ್ ಮಾಡಲೇಬೇಕಾ ಎಂಬ ಚಕಾವನ್ನು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್ ಎತ್ತಿದ್ದು ಇದಕ್ಕೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೌದು ಯೋಯೋ ಪರೀಕ್ಷೆ ಮಾಡಿದರೇ ಮಾತ್ರ ಟೀಂ ಇಂಡಿಯಾದಲ್ಲಿ ಆಡಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.
ಕೋಚ್ ರವಿಶಾಸ್ತ್ರಿ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಯೋಯೋ ಟೆಸ್ಟ್ ಕುರಿತಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಶಾಸ್ತ್ರಿ ಅವರು ಕಠಿಣ ರೀತಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರೂ ಅದು ತಂಡಕ್ಕೆ ಹೆಚ್ಚಿನ ಲಾಭದಾಯಕ. ಯೋಯೋ ಟೆಸ್ಟ್ ನಿಂದ ಆಟಗಾರನ ವೈಯಕ್ತಿಕ ಸಾಮರ್ಥ್ಯ ಅನಾವರಣಗೊಳ್ಳಲಿದೆ. ಇದು ತಂಡದಲ್ಲಿ ಆಡಬೇಕೆಂಬ ಭಾವನಾತ್ಮಕ ಅಂಶಕ್ಕಿಂತ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅಂಬಟ್ಟಿ ರಾಯುಡು 600ಕ್ಕೂ ಅಧಿಕ ಹೆಚ್ಚು ರನ್ ಬಾರಿಸಿದ್ದರು. ಯೋಯೋ ಟೆಸ್ಟ್ ನಲ್ಲಿ ಫೇಲ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಂದೀಪ್ ಪಾಟೀಲ್ ಅವರು ಯೋಯೋ ಟೆಸ್ಟ್ ಕುರಿತಂತೆ ಪ್ರಶ್ನೆ ಮಾಡಿದ್ದರು.