ಇಸ್ಲಾಮಾಬಾದ್: ಟಿವಿ ಸಂದರ್ಶನದ ವೇಳೆ ಪಾಸಿಸ್ತಾನಿ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ನೀಡಿದ್ದ ಹೇಳಿಕೆಯೊಂದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಕ್ಮಲ್ ಗೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ವಿವರ ಕೋರಿ ಸಮನ್ಸ್ ಡಜಾರಿ ಮಾಡಿದೆ.
ಮಾಧ್ಯಮ ಸಂದರ್ಶನದಲ್ಲಿ ಉಮರ್ ಅಕ್ಮಲ್ ನೀಡಿದ್ದ ಒಂದು ಹೇಳಿಕೆಯಿಂದ ವಿವಾದದ ಸುಳಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯಿಂದಲೇ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಂಡಾಮಂಡಲವಾಗಿದೆ. ಅಲ್ಲದೆ ಈ ಬಗ್ಗೆ ವಿವರಣೆ ನೀಡುವಂತೆ ಸಮನ್ಸ್ ಕೂಡ ಜಾರಿ ಮಾಡಿದೆ.
ಉಮರ್ ಅಕ್ಮಲ್ ಅವರು ಸಂದರ್ಶನದ ವೇಳೆ ಫಿಕ್ಸಿಂಗ್ ವಿಚಾರದ ಬಗ್ಗೆ ಮಾತನಾಡಿ, 2015ರ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ತನ್ನನ್ನ ಸಂಪರ್ಕಿಸಿದ್ದರು. ಪಂದ್ಯದಿಂದ ಹೊರಗುಳಿಯುವುದಲ್ಲದೆ, ಎರಡು ಡಾಟ್ ಬಾಲ್ ಆಡುವಂತೆ ಬುಕ್ಕಿಗಳು ಸೂಚಿಸಿದ್ದರು. ಇದಕ್ಕಾಗಿ 13 ಕೋಟಿ ರೂ. ಆಫರ್ ನೀಡಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಿಸಿಬಿ ತನಿಖೆಗೆ ಆದೇಶಿಸಿದ್ದು, ಘಟನೆಯ ಬಗ್ಗೆ ವಿವರಣೆ ನೀಡುವಂತೆ ಅಕ್ಮಲ್ ಅವರಿಗೆ ಸೂಚಿಸಿದೆ. ಐಸಿಸಿ ನಿಯಮದ ಪ್ರಕಾರ ಅಕ್ಮಲ್ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತರಬೇಕಿತ್ತು. ಆದರೆ ಅಕ್ಮಲ್ 3 ವರ್ಷಗಳ ಬಳಿಕ ಈ ವಿಚಾರವನ್ನ ಬಹಿರಂಗ ಪಡಿಸಿದ್ದು, ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಐಸಿಸಿ ಕಂಗೆಣ್ಣಿಗೂ ಅಕ್ಮಲ್ ಗುರಿಯಾಗಿದ್ದಾರೆ. ಇನ್ನು ಅಕ್ಮಲ್ ರನ್ನು ವಿಚಾರಣೆಗೆ ಹಾಜರಾಗುವಂತೆ ಪಿಸಿಬಿ ಸೂಚಿಸಿದೆ.
ಮೇಲ್ನೋಟಕ್ಕೆ ಯಾವುದೇ ಸ್ಪಾಟ್ ಫಿಕ್ಸಿಂಗ್ ನಡೆದಿಲ್ಲ. ಆದರೆ ಅಕ್ಮಲ್ ಹೇಳಿಕೆಯನ್ನ ತನಿಖೆ ನಡೆಸುತ್ತೇವೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಜೊತೆಗೆ ನಿಯಮ ಉಲ್ಲಂಘಿಸಿದ ಅಕ್ಮಲ್‌ಗೆ ಕನಿಷ್ಠ ಶಿಕ್ಷೆಯಾಗುವ ಸಾಧ್ಯತೆ ಕೂಡ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos