100ನೇ ಟಿ 20: ಐರ್ಲೆಂಡ್ ವಿರುದ್ಧ ಭಾರತಕ್ಕೆ 76 ರನ್ ಅಮೋಘ ಜಯ 
ಕ್ರಿಕೆಟ್

100ನೇ ಟಿ20: ಐರ್ಲೆಂಡ್ ವಿರುದ್ಧ ಭಾರತಕ್ಕೆ 76 ರನ್ ಅಮೋಘ ಜಯ

ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 76 ರನ್ ಗಳ ಭೂತಪೂರ್ವ ಜಯ ದಾಖಲಿಸಿದೆ.

ಡಬ್ಲಿನ್: ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 76 ರನ್ ಗಳ ಭೂತಪೂರ್ವ ಜಯ ದಾಖಲಿಸಿದೆ. ನೂರನೇ ಟಿ 20 ಆಡುತ್ತಿರುವ ಭಾರತ ತಂಡ ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ (97) ಹಾಗೂ ಶಿಖರ್ ಧವನ್ (74) ಅದ್ಭುತ ಆಟದ ಮೂಲಕ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿದ್ದ ಭಾರತ ಐರ್ಲೆಂಡ್ ತಂಡವನ್ನು ತನ್ನ ಮಾರಕ ಬೌಲಿಂಗ್ ದಾಳಿಯಿಂದ ಕಟ್ಟಿ ಹಾಕಿತ್ತು.
ಇನ್ನುಳಿದಂತೆ ಸುರೇಶ್ ರೈನಾ (10) ಹಾಗೂ ಮಹೇಂದ್ರ ಸಿಂಗ್ ಧೋನಿ (11) ವಿರಾಟ್ ಕೊಹ್ಲಿ (0) ಹಾಗೂ ಹಾರ್ದಿಕ್ ಪಾಂಡ್ಯ ಕಡೆ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದಾರೆ.
ಭಾರತದ ಕುಲ್‌ದೀಪ್ ಯಾದವ್ (21ಕ್ಕೆ 4) ಹಾಗೂ ಯುಜ್ವೇಂದ್ರ ಚಹಲ್ (38ಕ್ಕೆ 3) ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಐರ್ಲೆಂಡ್ ಪರವಾಗಿ ಜೇಮ್ಸ್‌ ಶಾನನ್‌ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಲ್ಲದೆ  29 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದರು. ಇವರು ಒಟ್ಟು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 60 ರನ್ ಕಲೆಹಾಕಿದ್ದರು.
ಆದರೆ ಐರ್ಲೆಂಡ್ ಪರ ಆಡಿದ್ದ ಇನ್ನಾವ ಆಟಗಾರರೂ ಇವರಿಗೆ ಸಾಥ್ ನೀಡಲಿಲ್ಲ.  ಪಾಲ್‌ ಸ್ಟಿರ್ಲಿಂಗ್‌ (1),  ಆ್ಯಂಡ್ರ್ಯೂ ಬಾಲ್ಬಿರ್ನಿ (11),  ಸಿಮಿ ಸಿಂಗ್ (7), ನಾಯಕ ಗ್ಯಾರಿ ವಿಲ್ಸನ್‌ (5), ಓ'ಬ್ರಿಯೆನ್‌ (10), ಸ್ಟುವರ್ಟ್‌ ಥಾಂಪ್ಸನ್‌ (12), ಸ್ಟುವರ್ಟ್‌ ಪೋಯ್ಟಂರ್‌ (7), ಜಾರ್ಜ್‌ ಡಾಕ್‌ರೆಲ್‌ (9), ಬಾಯ್ಡ್‌ ರಾರ‍ಯಂಕಿನ್‌ (5*) ಮತ್ತು ಪೀಟರ್ ಚೇಸ್‌ಗೆ (2*) ಗಳಿಸಿ ಪೆವಿಲಿಯನ್ ಸೇರಿದ್ದರು.
ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಗಳಿಸುವಲ್ಲಿ ಆಟ ಕೊನೆಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ