2ನೇ ಟಿ20 ಕೆ.ಎಲ್. ರಾಹುಲ್, ರೈನಾ ಅಬ್ಬರ, ಭಾರತ 213/4
ಡುಬ್ಲಿನ್: ಭಾರತ ಐರ್ಲೆಂಡ್ ನಡುವಿನ ದ್ವಿತೀಯ ಟಿ 20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಅತಿಥೇಯರಿಗೆ 214 ರನ್ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ಕೆಎಲ್ ರಾಹುಲ್ (70) ಹಾಗೂ ಸುರೇಶ್ ರೈನಾ (69) ಅವರ ಉತ್ತಮ ಪ್ರದರ್ಶ್ನಗಳೊಂದಿಗೆ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ.
ಇನ್ನು ಹೊಸ ವಿಶ್ವ ದಾಖಲೆ ಬರೆಯಲಿದ್ದಾರೆ ಎಂದು ನಿರೀಕ್ಷಿಸಿದ್ದ ನಾಯಕ ವಿರಾಟ್ ಕೊಹ್ಲಿ (9) ಎರಡಂಕಿ ಗಳಿಸುವಲ್ಲಿಯೂ ವಿಫಲವಾಗಿ ನಿರಾಶೆ ಉಂಟುಮಾಡಿದ್ದಾರೆ. ಆದರೆ ಕನ್ನಡಿಗ ರಾಹುಲ್ ದಿಟ್ಟ ಪ್ರದರ್ಶನ ನೀಡಿ 28 ಎಸೆತಗಳಲ್ಲೇ ಅರ್ಧಶತಕ ಗಳಿಸಿದ್ದರು. ರಾಹುಲ್ ಮೂರು ಬೌಂಡರಿ ಹಾಗೂ ಆರು ಸಿಕ್ಸರ್ ಗಳ ನೆರವಿನಿಂದ 70 ರನ್ ಗಳಿಸಿದ್ದಾರೆ.
ಇನ್ನುಳಿದಂತೆ ರೋಹಿತ್ ಶರ್ಮಾ ಸೊನ್ನೆ ಸುತ್ತಿ ನಿರಾಶೆ ಮೂಡಿಸಿದ್ದರೆ ಹಾರ್ದಿಕ್ ಪಾಂಡ್ಯ ಕಡೆ ಕ್ಷಣದಲ್ಲಿ ಬಿರುಸಿನ ಆಟವಾಡಿ 32 ರನ್ ಹಾಗೂ ಮನೀಷ್ ಪಾಂಡೆ 21 ರನ್ ಗಳೊಡನೆ ಅಜೇಯರಾಗಿ ಉಳಿದರು.