ಕ್ರಿಕೆಟ್

ಹಾರ್ದಿಕ್ ಪಾಂಡ್ಯಗೆ ಹೊಸ ಚಿಯರ್ ಲೀಡರ್ 'ಝೀವಾ ಧೋನಿ'!

Vishwanath S
ಮುಂಬೈ: ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಕೊನೆಯ ಎರಡು ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಗಳು ಪಂದ್ಯ ನಡೆಯುವ ವೇಳೆ ಚಿಯರ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ವೇಳೆ ಧೋನಿ ಜೊತೆಗಿದ್ದ ಝೀವಾ ತಮ್ಮ ತೊದಲು ನುಡಿಯ ಮಾತು, ನೃತ್ಯ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದಳು. ಇದೀಗ ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಕೊನೆಯ ಎರಡು ಓವರ್ ಗಳಲ್ಲಿ ಬ್ಯಾಟಿಂಗ್ ಇಳಿದ ಆಲ್ರೌಂಡರ್ ಗೆ ಚಿಯರ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಈ ವಿಡಿಯೋದಲ್ಲಿ ಟಿವಿ ನೋಡುತ್ತಿರುವ ಝೀವಾ ಕಮ್ ಆನ್ ಹಾರ್ದಿಕ್, ಕಮ್ ಆನ್ ಎಂದು ಚಿಯರ್ ಮಾಡುತ್ತಿದ್ದಾಳೆ. ಇದನ್ನು ಸ್ವತಃ ಹಾರ್ದಿಕ್ ಅವರೇ ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಇಲ್ಲಿಯವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 
SCROLL FOR NEXT