ಪಣಜಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೇಶದಲ್ಲಿ ಕ್ರಿಕೆಟ್ ಒಂದೇ ಅಲ್ಲ. ಪ್ರತಿಯೊಂದು ಕ್ರೀಡೆಯೂ ಬೆಳವಣಿಗೆ ಕಾಣಬೇಕು ಎಂದು ಹೇಳಿದ್ದಾರೆ.
ಸದ್ಯ ತಂಡದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ತಮ್ಮ ತಂಡವನ್ನು ಹುರಿದುಂಬಿಸಲು ಆಗಮಿಸಿದ್ದರು. ಐಎಸ್ಎಲ್ ನಲ್ಲಿ ಎಫ್ ಸಿ ಗೋವಾ ಸಹ ಮಾಲೀಕರಾಗಿರುವ ಕೊಹ್ಲಿ ತಮ್ಮ ತಂಡದ ಅದ್ಭುತ ಗೆಲುವಿಗೆ ಸಾಕ್ಷಿಯಾಗಿದ್ದರು.
ಭಾರತವು ಒಂದು ಕ್ರೀಡಾ ಸಂಸ್ಕೃತಿಯ ದೇಶವಾಗಿ ಬದಲಾಗಬೇಕೆಂಬುದು ನನ್ನ ಆಶಯ. ಅಲ್ಲಿ ಪ್ರತಿಯೊಬ್ಬರಿಗೂ ಕ್ರೀಡೆಯ ಬಗ್ಗೆ ತಿಳಿದಿರಬೇಕು. ಇದಕ್ಕಾಗಿ ಅವಕಾಶಗಳನ್ನು ಸೃಷ್ಟಿ ಮಾಡಬೇಕು. ಮುಂದಿನ 10-15 ವರ್ಷಗಳಲ್ಲಿ ಫುಟ್ಬಾಲಿಗರಿಗೆ ನಾನು ಭಾರತ ಹೋಗಿ ಆಡಬೇಕೆಂದರೆ ಗೋವಾ ತೆರಳಿ ತರಬೇತಿ ಪಡೆಯಬೇಕು ಎಂಬಂತಹ ಪರಿಸ್ಥಿತಿ ಮೂಡಿಸಲು ಬಯಸುತ್ತೇನೆ ಎಂದರು.