ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ಅಜಿಂಕ್ಯ ರಹಾನೆ ಹಾಗೂ ಸೂರ್ಯಕುಮಾರ್ ಯಾದವ್ ಚೊಚ್ಚಲ ಆವೃತ್ತಿಯ ಟಿ20 ಮುಂಬೈ ಲೀಗ್ ನ ಹಾರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ.
ಅಜಿಂಕ್ಯ ರಹಾನೆ ಮುಂಬೈ ನಾರ್ಥ್ ತಂಡಕ್ಕೆ ಹಾಗೂ ಸೂರ್ಯಕುಮಾರ್ ಮುಂಬೈ ನಾರ್ಥ್ ಈಸ್ಟ್ ತಂಡಕ್ಕೆ ತಲಾ 7 ಲಕ್ಷ ರುಪಾಯಿಗೆ ಮಾರಾಟವಾದರು.
ಇನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಮುಂಬೈ ನಾರ್ಥ್ ವೆಸ್ಟ್ ತಂಡಕ್ಕೆ 6 ಲಕ್ಷಕ್ಕೆ ಮಾರಾಟವಾದರು. ಮತ್ತೊಬ್ಬ ರಾಷ್ಟ್ರೀಯ ತಂಡದ ಆಟಗಾರ ಶ್ರೇಯಸ್ ಅಯ್ಯರ್ 5 ಲಕ್ಷಕ್ಕೆ ಮುಂಬೈ ನಾರ್ಥ್ ಸೆಂಟ್ರಲ್ ತಂಡ ಖರೀದಿಸಿದೆ.