ರಾಬಿನ್ ಉತ್ತಪ್ಪ-ದಿನೇಶ್ ಕಾರ್ತಿಕ್
ನವದೆಹಲಿ: ರಾಬಿನ್ ಉತ್ತಪ್ಪಗೆ ಬಹುತೇಕ ಖಚಿತಗೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಅಂತಿಮ ಹಂತದಲ್ಲಿ ಅವರಿಗೆ ಕೈತಪ್ಪಿದ್ದು ದಿನೇಶ್ ಕಾರ್ತಿಗೆ ಒಲಿದಿದೆ.
ಜನವರಿಯಲ್ಲಿ ನಡೆದ 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ರಾಬಿನ್ ಉತ್ತಪ್ಪ ಅವರು 7.4 ಕೋಟಿ ರುಪಾಯಿಗೆ ಕೆಕೆಆರ್ ತಂಡಕ್ಕೆ ಮಾರಾಟವಾಗಿದ್ದರು.
ದಿನೇಶ್ ಕಾರ್ತಿಕ್ ಇಲ್ಲಿಯವರೆಗೂ ಐಪಿಎಲ್ ನಲ್ಲಿ ಐದು ಫ್ರಾಂಚೈಸಿ ತಂಡಗಳ ಪರ ಆಡಿದ್ದ ಅನುಭವವಿದ್ದು ಈ ಹಿನ್ನೆಲೆಯಲ್ಲಿ ದಿನೇಶ್ ಗೆ ನಾಯಕತ್ವ ನೀಡಿದ್ದು ರಾಬಿನ್ ಉತ್ತಪ್ಪಗೆ ಉಪ ನಾಯಕ ಸ್ಥಾನ ನೀಡಲಾಗಿದೆ.
ಐಪಿಎಲ್ 10 ಆವೃತ್ತಿಗಳಲ್ಲಿ 152 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್ 24.81ರ ಸರಾಸರಿಯಲ್ಲಿ 2903 ರನ್ ಗಳನ್ನು ಪೇರಿಸಿದ್ದಾರೆ. ಇನ್ನು 14 ಅರ್ಧ ಶತಕ ಸಿಡಿಸಿರುವ ಅವರು 88 ಕ್ಯಾಚ್ ಮತ್ತು 26 ಸ್ಟಂಪ್ ಗಳನ್ನು ಮಾಡಿದ್ದಾರೆ.
ಗೌತಮ್ ಗಂಭೀರ್ ನಾಯಕ್ವತದಲ್ಲಿ ಕೆಕೆಆರ್ 2012 ಮತ್ತು 2014ರ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಕಳೆದ ಬಾರಿಯ 2018ರ ಐಪಿಎಲ್ ಹರಾಜಿನಲ್ಲಿ ಗೌತಮ್ ಗಂಭೀರರನ್ನು ತಂಡದಿಂದ ಕೈಬಿಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos