ಟಿ20: ಧವನ್ 90, ಲಂಕಾ ಗೆಲುವಿಗೆ 175 ರನ್ ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
ನಿಡಹಾಸ್ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧಆರಂಭಿಕ ಆಟಗಾರ ಶಿಖರ್ ಧವನ್ ಬಿರುಸಿನ ...
ಕೊಲಂಬೊ: ನಿಡಹಾಸ್ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧಆರಂಭಿಕ ಆಟಗಾರ ಶಿಖರ್ ಧವನ್ ಅವರ ಭರ್ಜರಿ ಅರ್ಧಶತಕದ(90) ನೆರವಿನಿಂದ ಟೀಂ ಇಂಡಿಯಾ ಲಂಕಾ ಗೆಲುವಿಗೆ 175 ರನ್ ಗಳ ಟಾರ್ಗೆಟ್ ನೀಡಿದೆ.
ಕೊಲಂಬೊದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 174 ರನ್‌ಗಳ ಬೃಹತ್ ಮೊತ್ತ ಸೇರಿಸಿದೆ.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದಕೊಂಡಿತ್ತು. ಭಾರತಕ್ಕೆ ಆರಂಭದಲ್ಲೇ ನಾಯಕನ ರೂಪದಲ್ಲಿ ರೋಹಿತ್ ಶರ್ಮಾ (0) ವಿಕೆಟ್ ನಷ್ಟವಾಯಿತು. ಅನುಭವಿ ಸುರೇಶ್ ರೈನಾ ಸಹ (1) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರೊಂದಿಗೆ 9 ರನ್ ಗಳಿಸುವುದರೆಡೆಗೆ ಪ್ರಮುಖ ಎರಡು ವಿಕೆಟುಗಳನ್ನು ಕಳೆದುಕೊಂಡಿತು.
ಈ ಹಂತದಲ್ಲಿ ಜತೆಗೂಡಿದ ಉಪನಾಯಕ ಶಿಖರ್ ಧವನ್ ಹಾಗೂ ಕನ್ನಡಿಗ ಮನೀಷ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಯಂಗ್ ಇಂಡಿಯಾ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಯುವ ಪಡೆಯೊಂದಿಗೆ ಲಂಕಾಗೆ ತೆರಳಿತ್ತು. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತ ನಡುವೆ ತ್ರಿಕೋನ ಟಿ20 ಸರಣಿ ನಡೆಯುತ್ತಿದೆ.