ಸಂಗ್ರಹ ಚಿತ್ರ 
ಕ್ರಿಕೆಟ್

ಮಹಿಳಾ ಕ್ರಿಕೆಟ್: 2ನೇ ಏಕದಿನ ಪಂದ್ಯವನ್ನೂ ಕೈ ಚೆಲ್ಲಿದ ಭಾರತ, ಆಸಿಸ್ ಮಹಿಳೆಯರಿಗೆ ಏಕದಿನ ಸರಣಿ

ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ಮಹಿಳೆಯರ ವಿರುದ್ಧ ಬರೊಬ್ಬರಿ 60 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶ ಮಾಡಿಕೊಂಡಿದೆ.

ವಡೋದರಾ: ಇಲ್ಲಿನ ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ಮಹಿಳೆಯರ ವಿರುದ್ಧ ಬರೊಬ್ಬರಿ 60 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶ ಮಾಡಿಕೊಂಡಿದೆ.
ಟಾಸ್ ಗೆದ್ದ ಮಿಥಾಲಿ ರಾಜ್ ಪಡೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸಿಸ್ ವನಿತೆಯರ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆಸಿಸ್ ನ ಆರಂಭಿಕ ಆಟಗಾರ್ತಿ ನಿಕೋಲ್ ಬೋಲ್ಟನ್ (84 ರನ್), ಎಲಿಸೆ ಪೆರ್ರಿ (ಅಜೇಯ 70 ರನ್), ಬೆತ್ ಮೂನಿ (55 ರನ್) ಅವರ ಉತ್ತಮ ಪ್ರದರ್ಶನದಿಂದ ಆಸಿಸ್ ಪಡೆ 250 ರನ್ ಗಳ ಗಡಿ ದಾಟಿ ಭಾರತಕ್ಕೆ 288 ರನ್ ಗಳ ಬೃಹತ್ ಗುರಿ ನೀಡಿತು.
ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮಿಥಾಲಿ ರಾಜ್ ಪಡೆ ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಆಸಿಸ್ ಮಹಿಳೆಯರಿಗೆ ಸವಾಲು ಒಡ್ಡಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (67 ರನ್) ಅವರನ್ನು ಹೊರತು ಪಡಿಸಿದರೆ, ನಾಯಕಿ ಮಿಥಾಲಿ ರಾಜ್ ಸೇರಿದಂತೆ ತಂಡದ ಹಿರಿಯ ಆಟಗಾರ್ತಿಯರಿಂದಲೂ ಉತ್ತಮ ಬ್ಯಾಟಿಂಗ್ ಮೂಡಿಬರಲಿಲ್ಲ. ಪರಿಣಾಮ ಭಾರತ ತಂಡ 49.2 ಓವರ್ ನಲ್ಲಿ ಕೇವಲ 227 ರನ್ ಗಳಿಗೆ ಆಲೌಟ್ ಆಯಿತು.
ಆ ಮೂಲಕ ಭಾರತ ತಂಡ ಆಸಿಸ್ ವನಿತೆಯರ ವಿರುದ್ಧ 60 ರನ್ ಗಳ ಹೀನಾಯ ಸೋಲು ಕಂಡಿತು. ಆಸಿಸ್ ಪರ ಜೆಸ್ಸ್ ಜೆನಾಸ್ಸೆನ್ 3 ವಿಕೆಟ್ ಪಡೆದರೆ, ಅಮಾಂಡ ಮತ್ತು ಎಲಿಸೆ ಪೆರ್ರಿ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೇ ರಾಜೀನಾಮೆ; ರಾಜ್ಯಪಾಲ ಗೆಹ್ಲೋಟ್ ಇಂದೇ ಬೆಂಗಳೂರಿಗೆ ವಾಪಸ್

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT