ವಿರಾಟ್ ಕೊಹ್ಲಿ ಎಷ್ಟು ಸೋಮಾರಿ ಗೊತ್ತಾ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ವಿಪರೀತ ಚುರುಕಾಗಿ ಬ್ಯಾಟಿಂಗ್ ಮಾಡಿ ಎದುರಾಳಿ ಬೌಲರ್ ಗಳ ನಿದ್ದೆ ಕೆಡಿಸುತ್ತಾರೆ. ಆದರೆ ಅವರು ಎಷ್ಟು ಸೋಮಾರಿ...
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ವಿಪರೀತ ಚುರುಕಾಗಿ ಬ್ಯಾಟಿಂಗ್ ಮಾಡಿ ಎದುರಾಳಿ ಬೌಲರ್ ಗಳ ನಿದ್ದೆ ಕೆಡಿಸುತ್ತಾರೆ. ಆದರೆ ಅವರು ಎಷ್ಟು ಸೋಮಾರಿ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.
ಸದ್ಯ ವಿಶ್ರಾಂತಿಯಿಂದ ತಂಡದಿಂದ ದೂರವಿರುವ ವಿರಾಟ್ ಕೊಹ್ಲಿ ಮನೆಯಲ್ಲಿ ಇದ್ದಾರೆ. ಕೊಹ್ಲಿ ಮನೆಯಲ್ಲಿದ್ದರೆ ತಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದೆಂದರೆ ಉದಾಸೀನತೆಯಂತೆ. ವಿಪರೀತ ಸೋಮಾರಿತನ ಅವರನ್ನು ಆವರಿಸಿಕೊಂಡು ಬಿಡುತ್ತದೆಯಂತೆ. ಇನ್ನು ಫ್ರಿ ಆಗಿದ್ದಾಗ ತರಕಾರಿ ಖಾದ್ಯಗಳನ್ನೇ ತಿನ್ನುವುದಾಗಿ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾ ಸದ್ಯ ನಿಡಾಹಸ್ ತ್ರಿಕೋನ ಟಿ20 ಸರಣಿ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸದಲ್ಲಿದೆ. ಬಿಸಿಸಿಐ ಆಯ್ಕೆ ಸಮಿತಿ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದು ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸದ್ಯ ಫ್ರಿ ಆಗಿದ್ದಾರೆ.