ಅಂಡರ್-19 ಮಹಿಳಾ ಏಷ್ಯಾ ಕಪ್: ಭಾರತ ತಂಡ ಪ್ರಕಟಿಸಿದ ಬಿಸಿಸಿಐ!

ನವದೆಹಲಿ: ಯುಎಇಯಲ್ಲಿ (UAE) ನಡೆಯಲಿರುವ ಅಂಡರ್-19 ಮಹಿಳಾ ಏಷ್ಯಾ ಕಪ್ಗಾಗಿ ಬಿಸಿಸಿಐ (BCCI) 15 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದ್ದು, ಭವಿಕಾ ಅಹಿರೆ ಅವರನ್ನು ನಾಯಕಿಯನ್ನಾಗಿ ನೇಮಿಸಿದೆ. ವಿಕೆಟ್ಕೀಪರ್-ಬ್ಯಾಟರ್ ಆಗಿರುವ ಭವಿಕಾ, ಇರಾ ಜಾಧವ್, ದಿಯಾ ಯಾದವ್, ನಿಧಿ ಮಹತೋ ಮತ್ತು ಅಕ್ಷಾ ಪರ್ಮಾರ್ ಸೇರಿದಂತೆ ಹಲವು ಭರವಸೆಯ ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.
ಮಹಿಳಾ ಆಯ್ಕೆ ಸಮಿತಿಯು ಅನಾದಿ ಟಾಗ್ದೆ ಅವರನ್ನು ಉಪನಾಯಕಿಯನ್ನಾಗಿ ನೇಮಿಸಿದೆ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಎರಡು ಪಂದ್ಯಗಳ ಅನಧಿಕೃತ ಟಿ20 ಸರಣಿಯಲ್ಲಿ ಭಾರತದ ಅಂಡರ್-19 ಮಹಿಳಾ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಭವಿಕಾ ಅವರ ನಾಯಕತ್ವದಲ್ಲಿ ಭಾರತವು ಆ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿನ ಉತ್ತಮ ಪ್ರದರ್ಶನದ ನಂತರ, ಭವಿಕಾ ಈಗ ಭಾರತೀಯ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಭವಿಕಾ, ಮೊದಲ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಪಂದ್ಯದಲ್ಲಿ ಅಕ್ಷಾ ಪರ್ಮಾರ್ ಕೂಡ 52 ರನ್ ಗಳಿಸಿ ಗಮನ ಸೆಳೆದಿದ್ದರು.
ಈ ಜೋಡಿಯು ಎರಡನೇ ಪಂದ್ಯದಲ್ಲೂ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿತು; ವಿಶೇಷವಾಗಿ ಪರ್ಮಾರ್ ಇನ್ನಷ್ಟು ಅದ್ಭುತ ಪ್ರದರ್ಶನ ನೀಡಿದ್ದರು. ಅವರು 41 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ 82 ರನ್ ಸಿಡಿಸಿದ್ದರು.
ಇತ್ತ ದಿಯಾ ಯಾದವ್ 49 ಎಸೆತಗಳಲ್ಲಿ 87 ರನ್ಗಳ ಭರ್ಜರಿ ಕೊಡುಗೆ ನೀಡಿದರು. ಪರಿಣಾಮವಾಗಿ, ಭಾರತವು ಎರಡನೇ ಪಂದ್ಯವನ್ನು 106 ರನ್ಗಳ ಅಂತರದಿಂದ ಗೆದ್ದು, ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ದಿಯಾ ಮತ್ತು ಅಕ್ಷಾ ಇಬ್ಬರೂ ಈ ಖಂಡಾಂತರ ಟೂರ್ನಮೆಂಟ್ಗಾಗಿ ತಂಡದಲ್ಲಿ ಸ್ಥಾನ ಪಡೆದಿದ್ದು, ನಾಯಕಿ ಭವಿಕಾ ಅವರೊಂದಿಗೆ ಭಾರತಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಬಲ ಒದಗಿಸಲಿದ್ದಾರೆ.
ತಂಡ ಇಂತಿದೆ:

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



