ಕೆವಿನ್ ಪೀಟರ್ಸನ್ 
ಕ್ರಿಕೆಟ್

ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಕೆವಿನ್ ಪೀಟರ್ಸನ್, ಸಾಮಾಜಿಕ ತಾಣದಲ್ಲಿ ಅಧಿಕೃತ ಘೋಷಣೆ

ಇಂಗ್ಲೆಂಡ್ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಇಂದು (ಮಾ.17) ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ

ನವದೆಹಲಿ: ಇಂಗ್ಲೆಂಡ್ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಇಂದು (ಮಾ.17) ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿರ್ಧಾರವನ್ನು ಅವರು ತಿಳಿಸಿದ್ದಾರೆ.
"ನಾನು ನನ್ನ ವೃತ್ತಿಜೀವನದಲ್ಲಿ 152 ಅರ್ಧಶತಕ ಮತ್ತು 68 ಶತಕ ಸೇರಿದಂತೆ  30,000+ ರನ್ ಗಳಿಸಿದ್ದೇನೆ. ಆಶಸ್ ಸರಣಿಯಲ್ಲಿ ನಾಲ್ಕು ಬಾರಿ ಜಯ, ಸ್ವದೇಶ ಹಾಗೂ ವಿದೇಶಗಳಲ್ಲಿ ಟಿ 20 ವಿಶ್ವಕಪ್ ಗೆಲುವು, ಬಾರತ ಕ್ರಿಕೆಟ್ ತಂಡವನ್ನು ಅವರ ತವರು ನೆಲದಲ್ಲಿ ಮಣಿಸಿದೆ. ಬಾಂಗ್ಲಾದೇಶ ಹೊರತುಪಡಿಸಿ ಎಲ್ಲಾ ಪ್ರಮುಖ ರಾಷ್ಟ್ರಗಳ ವಿರುದ್ಧ ಟೆಸ್ಟ್ ಗಳಲ್ಲಿ ಶತಕ ದಾಖಲೆ. ಈ ಎಲ್ಲವನ್ನೂ ನನ್ನನ್ನು ಎಲ್ಲಾ ಸಮಯದಲ್ಲಿ ಬೆಂಬಲಿಸಿದ ನನ್ನ ಕುಟುಂಬಕ್ಕೆ ಸಮರ್ಪಿಸುತ್ತೇನೆ. ನಾನು ಈ ನನ್ನ ಸಾಧನೆಗಳಿಗಾಗಿ ಹೆಮ್ಮೆ ಪಡುತ್ತೇನೆ. ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಎಲ್ಲರಿಗೂ ಮನರಂಜಿಸಿದ್ದೇನೆ. ನಾನು ಕ್ರಿಕೆಟ್ ಆಟವನ್ನು ಇಷ್ಟಪ್ಡುವವನಾಗಿದ್ದೇನೆ" ಇನ್ಸ್ಟಾಗ್ರ್ಯಾಂ ನಲ್ಲಿ ಪೀಟರ್ಸನ್ ಹೇಳಿಕೊಂಡಿದ್ದಾರೆ.
ಪ್ರಸಕ್ತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ವಿದೇಶದಲ್ಲಿ ನಡೆವ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಕೊನೆಯ ಪ್ರದರ್ಶನವಾಗಿರಲಿದೆ ಎಂದು ಪೀಟರ್ಸನ್  ಹೇಳಿದ್ದರು. ಇದಾಗ್ಯೂ ತಾವು ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಅವರು ಹೇಳಿದ್ದಾರೆ. ಪಿಎಸ್ಎಲ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್,ತಂಡವನ್ನು ಪ್ರತಿನಿಧಿಸುತ್ತಿದ್ದ ಪೀಟರ್ಸನ್ 2014 ರಿಂದ ವಿಶ್ವದಾದ್ಯಂತ ಹಲವಾರು ತಂಡಗಳಲ್ಲಿ ಆಡಿದ್ದಾರೆ. 
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ಜೆಟ್ ಗಾಗಿ ಆಟವಾಡಿದ್ದರು.  ದಿ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬರ್ನ್ ಸ್ಟಾರ್ಸ್ ತಂಡಕ್ಕೆ ಆತವಾಡಿದ್ದ ಇವರು ಕೌಂಟಿ ಕ್ರಿಕೆಟ್ ನಲ್ಲಿ ಸರ್ರೆಯನ್ನೂ ಪ್ರತಿನಿಧಿಸಿದ್ದರು.
ಇಂಗ್ಲೆಂಡ್ ಪರವಾಗಿ 104  ಟೆಸ್ಟ್ ಆಡಿದ್ದ ಪೀಟರ್ಸನ್ 47.28 ರ ಸರಾಸರಿಯಲ್ಲಿ 8,181 ರನ್ ಗಳಿಸಿದ್ದಾರೆ. 23 ಶತಕಗಳು ಮತ್ತು 35 ಅರ್ಧಶತಕಗಳು. ಇವರ ಹೆಸರಲ್ಲಿದೆ. 
ಇನ್ನು 136 ಏಕದಿನ ಪಂದ್ಯಗಳಲ್ಲಿ4 ,440 ರನ್ ಕಲೆಹಾಕಿರುವ ಈ ಆಟಗಾರ ಒಂಭತ್ತು ಶತಕ ಹಾಗೂ 25 ಅರ್ಧಶತಕಗಳನ್ನು ಸಿಡಿಸಿದ್ದಾರೆ.
37 ಟಿ20 ಗಲಲ್ಲಿ  ಏಳು ಅರ್ಧ-ಶತಕಗಳ ನೆರವಿನಿಂದ 1,176 ರನ್ ಗಳಿಸಿದ್ದಾರೆ. 2010ರಲ್ಲಿ ಪೀಟರ್ಸನ್ ಟಿ 20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT