ಕ್ರಿಕೆಟ್

ನಿಡಹಾಸ್ ಟ್ರೋಫಿ ಫೈನಲ್: ಬಾಂಗ್ಲಾ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Srinivasamurthy VN
ಕೊಲಂಬೋ: ತೀವ್ರ ಕುತೂಹಲ ಕೆರಳಿಸಿರುವ ನಿಡಹಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಪಂದ್ಯ ಗೆದ್ದಿರುವ ಭಾರತ ಆತ್ಮ ವಿಶ್ವಾಸದಿಂದ ಇದ್ದು, ಕಪ್ ಗೆಲ್ಲುವ ಭರವಸೆ ಮೂಡಿಸಿದೆ. ಅಂತೆಯೇ ಈ ಹಿಂದಿನ ಭಾರತದ ವಿರುದ್ಧದ ಪಂದ್ಯವನ್ನು ಸೋತಿರುವ ಬಾಂಗ್ಲಾದೇಶ ತಂಡ ಈ ಫೈನಲ್ ಪಂದ್ಯವನ್ನು ಗೆದ್ದು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾತುರವಾಗಿದೆ.
ಇನ್ನು ಈ ಹಿಂದೆ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆದ್ದಿರುವ ಬಾಂಗ್ಲಾದೇಶಕ್ಕೆ ಭಾರತ ಕಬ್ಬಿಣದ ಕಡಲೆಯಾಗುವ ಸಾಧ್ಯತೆ ಇದೆ.
ಭಾರತಕ್ಕೆ ತವರು ಕ್ರೀಡಾಂಗಣವಾಗಿ ಮಾರ್ಪಟ್ಟ ಕೊಲಂಬೋ
ಇನ್ನು ಈ ಹಿಂದೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರರು ತೋರಿದ ಅನುಚಿತ ವರ್ತನೆಯಿಂದ ಅಸಮಾಧಾನ ಗೊಂಡಿರುವ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ಇಂದು ಲಂಕಾ ತಂಡ ಆಡದೇ ಇದ್ದರೂ ಭಾರತಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮೈದಾನದಲ್ಲಿ ಕ್ಕಿಕ್ಕಿರಿದು ತುಂಬಿದ್ದಾರೆ. ಭಾರತದ ಮೇಲಿನ ಪ್ರೀತಿಗಿಂತ ಲಂಕಾ ಅಭಿಮಾನಿಗಳಲ್ಲಿ ಬಾಂಗ್ಲಾದೇಶದ ಆಟಗಾರರ ಅನುಚಿತ ವರ್ತನೆಯೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ.
ತಂಡ ಇಂತಿದೆ
ಭಾರತ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಸುರೇಶ್ ರೈನಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಲೋಕೇಶ್ ರಾಹುಲ್, ಮನೀಶ್ ಪಾಂಡೆ, ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಶರ್ದೂಲ್ ಠಾಕೂರ್, ಜಯದೇವ್ ಉನಾದ್ಕತ್, ಯಜುವೇಂದ್ರ ಚಾಹಲ್

ಬಾಂಗ್ಲಾದೇಶ
ತಮೀಮ್ ಇಕ್ಬಾಲ್, ಲೀತನ್ ದಾಸ್, ಸಬ್ಬೀರ್ ರಹಮಾನ್, ಮುಷ್ಫಿಕರ್ ರಹೀಮ್ (ವಿಕೆಟ್ ಕೀಪಪ್), ಸೌಮ್ಯ ಸರ್ಕಾರ್, ಮಹಮದುಲ್ಲಾ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದ್ ಹಸನ್, ಮುಸ್ತಾಫಿಜುರ್ ರೆಹಮಾನ್, ರುಬೆಲ್ ಹುಸೇನ್, ನಜ್ಮುಲ್ ಇಸ್ಲಾಂ
SCROLL FOR NEXT