ಕೊಲಂಬೋ: ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಟೀಂ ಇಂಡಿಯಾ ವಿರುದ್ಧ ನಿರ್ಭೀತವಾಗಿ ಆಡಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪಂದ್ಯದ ಕೊನೆಯ ಎಸೆತದವರೆಗೂ ಭಾರತ ವಿರುದ್ಧ ಹೋರಾಟ ನಡೆಸಿದರು. ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸದಿದ್ದರೆ ಸರಣಿ ಬಾಂಗ್ಲಾದೇಶದ ಪಾಲಾಗುತ್ತಿತ್ತು ಎಂದರು.
ಬಾಂಗ್ಲಾದೇಶ ಒಂದು ಉತ್ತಮ ತಂಡ. ಕಳೆದ ಮೂರು ವರ್ಷಗಳಲ್ಲಿ ಒಳ್ಳೆಯ ಫಾರ್ಮ್ ಕಂಡುಕೊಂಡಿದೆ. ಬಾಂಗ್ಲಾದೇಶ ನಿರ್ಭೀತ ಕ್ರಿಕೆಟ್ ಆಟವನ್ನಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ ಎಷ್ಟು ಬದಲಾಗಿದೆ ಎಂದು ಸ್ವತಃ ನಾವೇ ಕಂಡಿದ್ದೇವೆ ಎಂದರು.
ತಂಡದಲ್ಲಿ ಕೆಲ ಅನುಭವಿ ಆಟಗಾರರ ಜತೆ ಯುವ ಕ್ರಿಕೆಟಿಗರಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಮುಷ್ಫಿಕರ್ ರಹೀಂ ಸರಣಿಯಲ್ಲಿ ಎರಡು ಅರ್ಧ ಶತಕ ಸಿಡಿಸಿದ್ದಾರೆ. ಹಿರಿಯ ಆಟಗಾರ ಮಹಮುದುಲ್ಲಾ ಮತ್ತು ತಂಡದ ನಾಯಕ ಶಕೀಬ್ ಹಲ್ ಹಸನ್ ಉತ್ತರ ಪ್ರದೇಶ ನೀಡಿದ್ದು ಆತಿಥೇಯ ಶ್ರೀಲಂಕಾ ತಂಡವನ್ನು ಎರಡು ಬಾರಿ ಸೋಲಿಸಿತ್ತು ಎಂದು ಹೇಳಿದರು.