ಸಂಗ್ರಹ ಚಿತ್ರ 
ಕ್ರಿಕೆಟ್

ಐಪಿಎಲ್ ಗೆ ಭರ್ಜರಿ ಸಿದ್ಧತೆ: ಕೇವಲ 20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಾಹಾ

ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಕೇವಲ 20 ನಿಮಿಷಗಳಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಅಮೋಘ ಜಯ ತಂದಿತ್ತಿದ್ದಾರೆ.

ಕೋಲ್ಕತಾ: ಐಪಿಎಲ್ 2018ರ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಆಟಗಾರರೂ ಕೂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಕೇವಲ 20 ನಿಮಿಷಗಳಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಅಮೋಘ ಜಯ ತಂದಿತ್ತಿದ್ದಾರೆ.
ಇಂದು ಕೋಲ್ಕತಾದ ಕಾಳಿಘಾಟ್ ಕ್ರೀಡಾಂಗಣದಲ್ಲಿ ನಡೆದ ಜೆಸಿ ಮುಖರ್ಜಿ ಟ್ರೋಫಿಯ ಮೋಹನ್ ಬಗಾನ್ ಮತ್ತು ಬೆಂಗಾಲ್ ನಾಗ್ಪುರ ರೈಲ್ವೇಸ್ ನಡುವೆ ನಡೆದ ಟಿ20 ಪಂದ್ಯದಲ್ಲಿ ಮೋಹನ್ ಬಗಾನ್ ತಂಡದ ಪರವಾಗಿ ಆಡಿದ ವೃದ್ಧಿಮಾನ್ ಸಾಹಾ ಕೇವಲ 20 ಎಸೆತಗಳಲ್ಲಿ 102 ರನ್ ಸಿಡಿಸಿದ್ದಾರೆ. ಅವರ ಅಮೋಘ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 14 ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸೇರಿದ್ದವು.  ಸಿಂಗಲ್ ರನ್ ಕದಿಯುವ ಮೂಲರ ರನ್ ಖಾತೆ ತೆರೆದ ಸಾಹಾ ಬಳಿಕ ನೋಡ ನೋಡುತ್ತಿದ್ದಂತೆಯೇ ಸಿಕ್ಸರ್ ಬೌಂಡರಿಗಳ ಮಳೆಗರೆದರು.
ತಾವು ಎದುರಿಸಿದ 12ನೇ ಎಸೆತದಲ್ಲೇ ಅರ್ಧಶತಕ ಸಿಡಿಸಿದ ಸಾಹಾ, ನಂತರದ ಕೇವಲ 8 ಎಸೆತಗಳಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಸಾಹಾ ಸಿಕ್ಸರ್ ಸಿಡಿಸುವ ಮೂಲಕವೇ  ಶತಕ ಗಳಿಸಿದ್ದು ಅವರ ಇನ್ನಿಂಗ್ಸ್ ನ ಮತ್ತೊಂದು ವಿಶೇಷವಾಗಿತ್ತು. ಇಷ್ಟು ದಿನ ಟೀಂ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದ ಸಾಹಾ ಇದೀಗ ತಾವು ಟಿ20 ಮಾದರಿಗೂ ಸೈ ಎನ್ನುವ ಮೂಲಕ ಮುಂಬರುವ ಐಪಿಎಲ್ ಟೂರ್ನಿಗೆ ಭರ್ಜರಿಯಾಗಿಯೇ ಸ್ವಾಗತ ಕೋರಿದ್ದಾರೆ.
ಇನ್ನು ತಮ್ಮ ಅಮೋಘ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಸಾಹಾ, ಮೊದಲ ಎಸೆತ ಎದುರಿಸಿದಾಗ ಇದನ್ನು ಸಿಕ್ಸರ್ ಗೆ ಅಟ್ಟಬಹುದಿತ್ತು ಎಂದು ಕೊಂಡಿದ್ದೆ. ಆಗ ಮೊದಲ ಎಸೆತದಲ್ಲಿ ಸಾದ್ಯವಾಗದ್ದನ್ನು ಎರಡನೇ ಎಸತೆದಲ್ಲಿ ಸಾಧಿಸಿದೆ. ಬಳಿಕ ನಾನು ಎದುರಿಸಿದ ಎಸೆತಗಳ ಪೈಕಿ ಬಹುತೇಕ ಎಸೆತಗಳನ್ನು ನಾನು ಸಮರ್ಥವಾಗಿ ಆಡಿದೆ. ನನ್ನ ಈ ಇನ್ನಿಂಗ್ಸ್ ದಾಖಲೆ ಬರೆದಿದೆಯೋ ಇಲ್ಲವೋ ತಿಳಿಯದು. ಆದರೆ ನಾನಂತು ಈ ಇನ್ನಿಂಗ್ಸ್ ಅನ್ನು ಹೆಚ್ಚು ಖುಷಿಯಿಂದ ಆಡಿದ್ದೇನೆ ಎಂದು ಸಾಹಾ ಹೇಳಿದ್ದಾರೆ.
ಇನ್ನು ಹಾಲಿ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಕ್ರಿಸ್ ಗೇಯ್ಲ್ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!