ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ನಿಮಗೆ ಗೊತ್ತೇ..ಭಾರತದ ಸಚಿನ್ ಮತ್ತು ದ್ರಾವಿಡ್ ಮೇಲೂ ಚೆಂಡು ವಿರೂಪಗೊಳಿಸಿದ ಆರೋಪವಿತ್ತು!

ಆಸ್ಟ್ರೇಲಿಯಾ ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆ ಇಂತಹುದೇ ಗಂಭೀರ ಆರೋಪ ಭಾರತದ ಸವ್ಯಸಾಚಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮೇಲೂ ಇತ್ತಂತೆ..

ಸಂಗ್ರಹ ಚಿತ್ರ
Srinivasa Murthy VN
Updated On : 28 Mar 2018, 10:08 am
ನವದೆಹಲಿ: ಆಸ್ಟ್ರೇಲಿಯಾ ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆ ಇಂತಹುದೇ ಗಂಭೀರ ಆರೋಪ ಭಾರತದ ಸವ್ಯಸಾಚಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮೇಲೂ ಇತ್ತಂತೆ..
ಚೆಂಡು ವಿರೂಪಗೊಳಿಸಿದ ಖ್ಯಾತನಾಮರ ಪಟ್ಟಿಯಲ್ಲಿ ವಾಸ್ತವವಾಗಿ ಸ್ವೀವ್ ಸ್ಮಿತ್ ಮಾತ್ರ ಇರುವುದಲ್ಲ. ಕ್ರಿಕೆಟ್‍ ಸ್ಟಾರ್ ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಕೂಡಾ ಚೆಂಡು ವಿರೂಪಗೊಳಿಸಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. 
ಅತಿಯಾಗಿ ಮನವಿ ಸಲ್ಲಿಸಿದ ಕಾರಣಕ್ಕೆ ಐದು ಮಂದಿ ಭಾರತೀಯ ಕ್ರಿಕೆಟರ್ ಗಳಿಗೆ ಶಿಕ್ಷೆ ವಿಧಿಸಿದಾಗ ಮತ್ತು ಪೋರ್ಟ್ ಎಲಿಜಬೆತ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕಾಗಿ ತೆಂಡೂಲ್ಕರ್ ಗೆ ನಿಷೇಧ ಹೇರಲಾಗಿತ್ತು. ಆಗ  ಮ್ಯಾಚ್‍ ರೆಫ್ರಿ ಮೈಕ್ ಡೆನಿಸ್ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಅತ್ಯುನ್ನತ ಸ್ಥಾನದಲ್ಲಿದ್ದರು. ಅಂದು ಮೈದಾನದಲ್ಲಿ ಸಚಿನ್ ಚೆಂಡಿನ ಸೀಮ್ ನಲ್ಲಿ ಅಂಟಿಕೊಂಡಿದ್ದ ಮಣ್ಣನ್ನು ತೆಗೆಯುತ್ತಿದ್ದರು. ಇದನ್ನು ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಆದರೆ ಅಂಪೈರ್ ಗಳು ಇದನ್ನು ಗಮನಿಸದ ಕಾರಣ, ಇದು ಚೆಂಡಿನ ಸ್ಥಿತಿಯನ್ನು ತಿದ್ದಿದ ನಿಬಂಧನೆಗಳಡಿಯಲ್ಲಿ ಬಂದಿದೆ.  ಈ ಪ್ರಕರಣ ಭಾರತಕ್ಕೆ ಗಂಭೀರ ತಿರುಗುಬಾಣವಾಗಿ ಪರಿಣಮಿಸಿತು ಮತ್ತು ಕ್ಷಿಪ್ರವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಸಚಿನ್ ಗೆ ಒಂದು ಪಂದ್ಯದ ಅಮಾನತು ಶಿಕ್ಷೆ ಕೂಡ ವಿಧಿಸಲಾಗಿತ್ತು. ಬಳಿಕ ಈ ಘಟನೆಯ ಬಗ್ಗೆ ವಿಸ್ತೃತವಾದ ತನಿಖೆ ನಡೆಸಿದ ಐಸಿಸಿ, ತೆಂಡೂಲ್ಕರ್ ಅವರಿಗೆ ವಿಧಿಸಿದ್ದ ಒಂದು ಪಂದ್ಯದ ಅಮಾನತು ಶಿಕ್ಷೆಯನ್ನು ರದ್ದು ಮಾಡಿತು.

Advertisement

Advertisement

ಸಚಿನ್ ರಂತೆಯೇ ದ್ರಾವಿಡ್ ಮೇಲೂ ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯ ಆಡುವ ವೇಳೆ ದ್ರಾವಿಡ್ ಚೆಂಡಿಗೆ ಎಂಜಲು ಉಜ್ಜುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಂತೆ ಭಾರತೀಯ ತಂಡದ ನಾಯಕ ದ್ರಾವಿಡ್ ಅವರು ಉದ್ದೇಶಪೂರ್ವಕವಾಗಿ ಚೆಂಡಿಗೆ ಎಂಜಲು ಹಚ್ಚಿದ್ದಾರೆ ಎಂದು ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ್ ಹೇಳಿದ್ದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದರು. ಈ ತಪ್ಪಿಗಾಗಿ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments