ಸ್ಟೀವ್ ಸ್ಮಿತ್-ಪೀಟರ್ ಸ್ಮಿತ್
ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರ ಕ್ರಿಕೆಟ್ ಕಿಟ್ ಅನ್ನು ಅವರ ತಂದೆ ಕಸದ ತೊಟ್ಟಿಗೆ ಎಸೆದಿದ್ದಾರೆ.
ಸ್ಟೀವ್ ಸ್ಮಿತ್ ಅವರ ತಂದೆ ಪೀಟರ್ ಸ್ಮಿತ್ ಶನಿವಾರ ಕ್ರಿಕೆಟ್ ಕಿಟ್ ಅನ್ನು ಕಸದ ತೊಟ್ಟಿಗೆ ಎಸೆಯುತ್ತಿರುವ ವಿಡಿಯೋವನ್ನು ಆಸೀಸ್ ಮಾಧ್ಯಮವೊಂದು ವರದಿ ಮಾಡಿದೆ. ಈ ವೇಳೆ ಅವರು ತನ್ನ ಮಗ ಕೆಲ ಸಮಯದ ಬಳಿಕ ಸರಿ ಹೋಗುತ್ತಾನೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ಮರಳಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಅಭಿಮಾನಿಗಳ, ಪೋಷಕರ ಕ್ಷಮೆ ಕೇಳಿದ್ದರು. ಅಲ್ಲದೇ ತಮ್ಮ ನಾಯಕತ್ವದ ವಿಫಲತೆಯಿಂದ ಕೃತ್ಯ ನಡೆದಿದ್ದು ನನ್ನಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ನನ್ನ ಪೋಷಕರಿಗೆ ತುಂಬಾ ನೋವಾಗಿದೆ. ಇದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರಿಟ್ಟಿದ್ದರು.
ಕಳ್ಳಾಟದಿಂದಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಅವರಿಗೆ ನಿಷೇಧ ಹೇರಿತ್ತು.