ಸಂಗ್ರಹ ಚಿತ್ರ 
ಕ್ರಿಕೆಟ್

ನಿರ್ಗಮನದ ಹೊಸ್ತಿಲಲ್ಲಿರುವ ಆರ್ ಸಿಬಿಗೆ ಈ ಒಂದು ಅಂಶ ಪ್ಲಸ್ ಆಗಬಹುದು!

ಬಹುತೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ನಿರ್ಗಮನದ ಹೊಸ್ತಿಲಲ್ಲಿ ಬಂದು ನಿಂತಿದೆ. ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಆರ್ ಸಿಬಿ ಗೆದ್ದರಷ್ಟೇ ಟೂರ್ನಿಯಲ್ಲಿ ಅದು ಜೀವಂತ..

ಬೆಂಗಳೂರು: ನಿರ್ಣಾಯಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲುವ ಮೂಲಕ ಬಹುತೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ನಿರ್ಗಮನದ ಹೊಸ್ತಿಲಲ್ಲಿ ಬಂದು ನಿಂತಿದೆ. ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಆರ್ ಸಿಬಿ ಗೆದ್ದರಷ್ಟೇ ಟೂರ್ನಿಯಲ್ಲಿ ಅದು ಜೀವಂತ..
ಹೌದು.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲು ಆರ್ ಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಟೂರ್ನಿಯಲ್ಲಿ ಮುಂದುವರೆಯಬೇಕಾದರೆ ಶತಾಯಗತಾಯ ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಕೊಹ್ಲಿ ಪಡೆ ಗೆಲ್ಲಲೇಬೇಕಿದೆ. ಪ್ರಸ್ತುತ ಆರ್ ಸಿಬಿ ತಂಡ 9 ಪಂದ್ಯಗಳಿಂದ 6 ಅಂಕಗಳಿಸಿದ್ದು, ಇಷ್ಟೇ ಅಂಕಗಳ ಗಳಿಸಿರುವ ತಂಡಗಳ ಪಟ್ಟಿಯಲ್ಲಿ ಆರ್ ಸಿಬಿ ಅಗ್ರ ಸ್ಥಾನದಲ್ಲಿದೆ. ಆರ್ ಸಿಬಿಯ ನೆಟ್ ರನ್ ರೇಟ್ ಆರ್ ಸಿಬಿಗೆ ಇದೀಗ ಆಮ್ಲಜನಕವಾಗಿದ್ದು, ತನ್ನ ಮುಂದಿರುವ ಬಾಕಿ ಐದು ಪಂದ್ಯಗಳನ್ನು ಆರ್ ಸಿಬಿ ಗೆಲ್ಲಲೇ ಬೇಕಿದೆ.
ಆರ್ ಸಿಬಿ ತನ್ನ ಮುಂದಿನ ಐದು ಪಂದ್ಯಗಳಲ್ಲಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಬಾದ್ ತಂಡವನ್ನು ಎರಡು ಬಾರಿ ಎದುರಿಸಲಿದ್ದು, ಉಳಿದಂತೆ ಕಿಂಗ್ಸ್ ಇಲೆವನ್ ಪಂಜಾಬ್, ಡೆಲ್ಲಿ ಡೇರ್ ಡೆವಿಲ್ಸ್,  ರಾಜಸ್ಥಾನ ರಾಯಲ್ಸ್ ತಂಡಗಳ ವಿರುದ್ಧ ಯಾವುದೇ ಕಾರಣಕ್ಕೂ ಗೆಲ್ಲಲೇಬೇಕಿದೆ. ಆಗ ತಂಡ ಒಟ್ಟಾರೆ ಅಂಕ ಏರಿಕೆಯಾಗಿ ಆರ್ ಸಿಬಿ ಸೆಮಿಫೈನಲ್ ಹಂತಕ್ಕೇರುವ ಸಾಧ್ಯತೆ.
ಒಂದು ವೇಳೆ ಆರ್ ಸಿಬಿ ಈ ಐದು ಪಂದ್ಯಗಳಲ್ಲಿ ಯಾವುದೇ ಒಂದು ಪಂದ್ಯ ಸೋತರೂ ಅದು ಟೂರ್ನಿಯಿಂದ ಹೊರ ಬೀಳುವುದು ನಿಶ್ಚಿತವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ