ಶ್ರೇಯಸ್ ಅಯ್ಯರ್-ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊದಲ ಕೌಂಟಿ ಪ್ರವಾಸದಿಂದಾಗಿ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಅವರು ಗೈರಾಗಲಿದ್ದು ಕೊಹ್ಲಿ ಬದಲಿಗೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಆಡುವ ಸಾಧ್ಯತೆ ಇದೆ.
ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯ ಜೂನ್ 14ರಂದು ನಡೆಯಲಿದೆ. ಜೂನ್ ತಿಂಗಳಾಂತ್ಯ ವಿರಾಟ್ ಕೊಹ್ಲಿ ಕೌಂಟಿ ಪಂದ್ಯಗಳನ್ನು ಆಡಲಿದ್ದು ಈ ಹಿನ್ನೆಲೆಯಲ್ಲಿ ಐರ್ಲೆಂಡ್ ವಿರುದ್ಧ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೂ ಕೊಹ್ಲಿ ಅಲಭ್ಯರಾಗಲಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ನಾಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಆಟಗಾರರನ್ನು ಆಯ್ಕೆ ಮಾಡಲಿದೆ. ಕೊಹ್ಲಿ ಅಲಭ್ಯ ಹಿನ್ನೆಲೆ ಭಾರತ ಟೆಸ್ಟ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಇನ್ನು ಐರ್ಲೇಂಡ್ ವಿರುದ್ಧದ 2 ಪಂದ್ಯ ಟಿ20 ಸರಣಿಯ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics