ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ತಲೆನೋವೊಂದು ಶುರುವಾಗಿದ್ದು, ಏಕಕಾಲದಲ್ಲಿ ಎರಡೆರಡು ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕಾದ ಗೊಂದಲಕ್ಕೆ ಸಿಲುಕಿದ್ದಾರೆ.
ಹೌದು.. ಬಿಸಿಸಿಐ ಇತ್ತೀಚೆಗೆ ಐರ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಿರುವ ಭಾರತ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹೆಸರಿದ್ದು, ಪ್ರಮುಖವಾಗಿ ಟಿ20 ಸರಣಿ ಪಟ್ಟಿಯಲ್ಲೂ ಕೊಹ್ಲಿ ಹೆಸರಿದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ಟಿ20 ಸರಣಿ ಸಂದರ್ಭದಲ್ಲೇ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂಗ್ಲೆಂಡ್ ನ ಸರ್ರೆ ತಂಡದ ಪರವಾಗಿ ಕೊಹ್ಲಿ ಬ್ಯಾಟ್ ಬೀಸಲಿದ್ದು, ಇದೇ ಕಾರಣಕ್ಕೆ ಕೊಹ್ಲಿ ಐತಿಹಾಸಿ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿಕೊಂಡಿದ್ದರು.
ಆದರೆ ಇದೀಗ ಕೊಹ್ಲಿ ಅವರನ್ನು ಐರ್ಲೆಂಡ್ ವಿರುದ್ಧ ಟಿ20 ಸರಣಿಗೂ ಆಯ್ಕೆ ಮಾಡುವ ಮೂಲಕ ಬಿಸಿಸಿಐ ಯಡವಟ್ಟು ಮಾಡಿದೆ. ಮುಂಬರುವ ಜೂನ್ 278ರಿಂದ 29ರವರೆಗೆ 2 ಟಿ20 ಪಂದ್ಯಗಳು ನಡೆಯಲಿದ್ದು, ಅದೇ ಜೂನ್ 25ರಿಂದ 28ರವರೆಗೆ ಕೊಹ್ಲಿ ಸರ್ರೆ ತಂಡದ ಪರ ಸ್ಕಾರ್ ಬಾರೋನಲ್ಲಿ ಯಾರ್ಕ್ ಶೈರ್ ತಂಡವನ್ನು ಎದುರಿಸಲಿದ್ದಾರೆ.
ಈ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರಲ್ಲಿ ವಿಚಾರಿಸಿದಾಗ, ಕಾರ್ಯದರ್ಶಿ ಅಮಿತಾಬ್ ಚೌದರಿ ಅವರಲ್ಲಿ ಈ ಬಗ್ಗೆ ವಿವರ ಕೇಳುತ್ತೇವೆ ಎಂದು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಅಮಿತಾಬ್ ಚೌದರಿ ಅವರನ್ನುಪ್ರಶ್ನಿಸಿದಾಗ ಯಾವುದೇ ರೀತಿಯ ಆತಂಕ ಬೇಡ.. ಕೊಹ್ಲಿ ವೇಳಾಪಟ್ಟಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕೊಹ್ಲಿ ಅವರನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದರೆ ಬಹುಶಃ ಅವರು 2 ಕೌಂಟಿ ಪಂದ್ಯಗಳಲ್ಲಿ ಮಾತ್ರ ಪಾಲ್ಗೊಳ್ಳಬಹುದು ಎಂದೆನಿಸುತ್ತದೆ. ಈ ಬಗ್ಗೆ ವಿಚಾರಿಸಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos