ಸಂಗ್ರಹ ಚಿತ್ರ 
ಕ್ರಿಕೆಟ್

ಈಗಲೂ ಆರ್ ಸಿಬಿ ಪ್ಲೇ ಆಫ್ ಗೆ ಏರಬಹುದು ಹೇಗೆ ಗೊತ್ತಾ?.. ಅಭಿಮಾನಿ ಹೇಳಿದ್ದಾನೆ ನೋಡಿ..!

ಬೆಂಗಳೂರು ತಂಡದ ಐಪಿಎಲ್ ಪಯಣ ಮುಕ್ತಾಯವಾಗಿತ್ತು ಎಂದೇ ಭಾವಿಸಲಾಗಿದೆ. ಆದರೆ ಆರ್ ಸಿಬಿ ಅಭಿಮಾನಿಯೊಬ್ಬ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿಲ್ಲ, ಇನ್ನೂ ಕೊಹ್ಲಿ ಪಡೆಗೆ ಅವಕಾಶವಿದೆ ಎಂದು ಲೆಕ್ಕಾಚಾರದ ಸಹಿತ ವಿವರಿಸಿದ್ದಾನೆ.

ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಪಯಣ ಮುಕ್ತಾಯವಾಗಿತ್ತು ಎಂದೇ ಭಾವಿಸಲಾಗಿದೆ. ಆದರೆ ಆರ್ ಸಿಬಿ ಅಭಿಮಾನಿಯೊಬ್ಬ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿಲ್ಲ, ಇನ್ನೂ ಕೊಹ್ಲಿ ಪಡೆಗೆ ಅವಕಾಶವಿದೆ ಎಂದು ಲೆಕ್ಕಾಚಾರದ ಸಹಿತ ವಿವರಿಸಿದ್ದಾನೆ.
ಹೌದು...ಶ್ರೀ ಹರಿ ರಮಣ್ ಎಂಬ ಟ್ವಿಟರ್ ಖಾತೆದಾರ ಆರ್ ಸಿಬಿಯ ಬಾಕಿ ಉಳಿದಿರುವ ಪಂದ್ಯಗಳ ಮತ್ತು ಇತರೆ ತಂಡಗಳ ಬಾಕಿ ಪಂದ್ಯಗಳ ಕುರಿತು ಸುಧೀರ್ಘ ಲೆಕ್ಕಾಚಾರ ಮಾಡಿದ್ದು, ಈ ಪೈಕಿ ಆರ್ ಸಿಬಿ ತಂಡ ಯಾವುದೇ ತಂಡಗಳ ಸಹಾಯ ಅಥವಾ ನೆಟ್ ರನ್ ರೇಟ್ ನೆರವಿಲ್ಲದೆ ಪ್ಲೇ ಆಫ್ ಗೆ ಹೋಗಬಹುದು. ಆದರ ಬಾಕಿ ಉಳಿದಿರುವ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕು.. ಒಂದು ವೇಳೆ ನಾಲ್ಕು ಪಂದ್ಯಗಳ ಪೈಕಿ ಒಂದನ್ನು ಸೋತರೂ ಕೂಡ ಆರ್ ಸಿಬಿಗೆ ಅವಕಾಶವಿದ್ದು, ಆಗ ತಂಡಕ್ಕೆ ಮತ್ತೆ ನೆಟ್ ರನ್ ರೇಟ್ ನ ನೆರವು ಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾನೆ.
ಜೊತೆಗೆ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ತಂಡದೊಂದಿಗಿನ ಪಂದ್ಯವನ್ನು ಗೆಲ್ಲಲೇ ಬೇಕಿದ್ದು, ಆರ್ ಸಿಬಿ ಹೊರತು ಪಡಿಸಿ ಉಳಿದ ಎಲ್ಲ ತಂಡಗಳ ವಿರುದ್ಧ ಪಂದ್ಯಗಳನ್ನು ರಾಜಸ್ಥಾನ ಗೆದ್ದರೆ ಅದರಿಂದ ಆರ್ ಸಿಬಿ ಪ್ಲೇ ಆಫ್ ಲೆಕ್ಕಾಚಾರಕ್ಕೆ ತೊಂದರೆ ಇಲ್ಲ ಎಂದೂ ಟ್ವೀಟ್ ಮಾಡಲಾಗಿದೆ.
ಒಟ್ಟಾರೆ ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ತಂಡ ಸತತ ನಿರಾಸೆ ಮೂಡಿಸಿದ್ದರೂ ತಂಡದ ಮೇಲಿನ ನಂಬಿಕೆ ಬಿಡದ ಕೊಹ್ಲಿ ಪಡೆಯ ಕಟ್ಟಾ ಅಭಿಮಾನಿಗಳು ಇನ್ನೂ ಭರವಸೆ ಕಳೆದುಕೊಂಡಿಲ್ಲ. ಈಗಲೂ ಅವರು ಈ ಸಲ ಕಪ್ ನಮ್ದೇ ಎಂಬ ಘೋಷಣೆಗಳನ್ನು ಮೊಳಗಿಸುತ್ತಲೇ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT