ದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮೇ.12 ರಂದು ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ನ ಬಿರುಸಿನ ಬ್ಯಾಟಿಂಗ್ ಪರಿಣಾಮವಾಗಿ ಡೆಲ್ಲಿ ತಂಡದ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಜಯ ದಾಖಲಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ ಸಿಬಿ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂದವನ್ನು ನಿಗದಿತ 20 ಓವರ್ ಗಳಲ್ಲಿ 181 ರನ್(4 ವಿಕೆಟ್) ಗಳಿಗೆ ಕಟ್ಟಿ ಹಾಕಿತು. ಸವಾಲಿನ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲೇ ಪ್ರಾರಂಭಿಕ ಆಟಗಾರರಾದ ಪಾರ್ಥಿವ್ ಪಟೇಲ್(6) ಹಾಗೂ ಮೊಯಿನ್ ಅಲಿ (1) ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಗೂಡಿದ ತಂಡದ ನಾಯಕ ವಿರಾಟ್ ಕೊಹ್ಲಿ (40 ಎಸೆತ 70 ರನ್) ಹಾಗೂ ಎಬಿಡಿ ವಿಲಿಯರ್ಸ್ (37 ಎಸೆತಗಳಲ್ಲಿ 72 ರನ್) ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆದರೆ ವಿರಾಟ್ ಕೊಹ್ಲಿ-ಎಬಿಡಿ ಜೊತೆಯಾಟ ಪಂದ್ಯದ ಕೊನೆಯವರೆಗೂ ಉಳಿಯಲಿಲ್ಲ, ಈ ನಡುವೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು ನಂತರ ಬಂದ ಮನ್ದೀಪ್ ಸಿಂಗ್ ಹಾಗೂ ಸರ್ಫರಾಜ್ ಖಾನ್ ಸಹ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ಎಬಿಡಿ ಹಾಗೂ ಕಾಲಿನ್ ಡೇ ಗ್ರಾಂಡ್‌ಹೋಮ್ ಆರ್ ಸಿಬಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್ ವಿವರ