ಕೆ ಎಲ್ ರಾಹುಲ್ 
ಕ್ರಿಕೆಟ್

ಐಪಿಎಲ್ 2018: ಕೆ.ಎಲ್. ರಾಹುಲ್ ಹೋರಾಟ ವ್ಯರ್ಥ, ಮುಂಬೈಗೆ ಶರಣಾದ ಪಂಜಾಬ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2018ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಪಂಜಾಬ್​ ವಿರುದ್ಧ 3 ರನ್​ಗಳ ರೋಚಕ ಜಯ ದಾಖಲಿಸಿದೆ.

ಮುಂಬೈ:ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2018ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಪಂಜಾಬ್​ ವಿರುದ್ಧ 3 ರನ್​ಗಳ  ರೋಚಕ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಮುಂಬೈ ಪರ ಕೀರನ್​ ಪೋಲಾರ್ಡ್​(50), ಕೃನಾಲ್​ ಪಾಂಡ್ಯ(32) ಹಾಗೂ ಸೂರ್ಯ ಕುಮಾರ್​ ಯಾದವ್​ ​(27) ರನ್ ಗಳಿಸಿದ್ದರು. 
ಪಂಜಾಬ್ ಪರವಾಗಿ ಆ್ಯಂಡ್ರಿವ್​ ಟೈ 4 ವಿಕೆಟ್​, ರವಿಚಂದ್ರನ್​ ಅಶ್ವಿನ್​ 2, ಅಂಕಿತ್​ ರಜಪೂತ್​ ಹಾಗೂ ಮಾರ್ಕಸ್​ ಸ್ಟೋನೀಸ್​ ತಲಾ​ ಒಂದು ವಿಕೆಟ್​ ಪಡೆದು ಮಿಂಚಿದರು.
ಮುಂಬೈ ನಿಂದ ಗೆಲುವಿಗೆ 187 ರನ್​ ಗುರಿ ಪಡೆದ ಪಂಜಾಬ್ ನಿಗದಿತ ಓವರ್ ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 183 ರನ್​ ಕಲೆಹಾಕುವದಕ್ಕಷ್ಟೇ ಸಮರ್ಥವಾಯಿತು. 
ಪಂಜಾಬ್ ಪರ ಕನ್ನಡಿಗ ಕೆ.ಎಲ್ ರಾಹುಲ್ ಸಿಡಿಸಿದ್ದ ಅರ್ಧಶತಕ ಸಹ ((94) ತಂಡದ ನೆರವಿಗೆ ಬರಲಿಲ್ಲ. ಇನ್ನು ಆ್ಯರೂನ್​ ಫಿಂಚ್​(46) ಸಹ ಉತ್ತಮ ಪ್ರದರ್ಶನ ನೀಡಿದ್ದರೂ ತಂಡ ಗೆಲುವಿನ ದಡ ತಲುಪಲು ವಿಫಲಾಯಿತು.
ಮುಂಬೈನ ಜಸ್ಪ್ರಿತ್​ ಬೂಮ್ರಾ 3, ಮೈಕೆಲ್​ ಮೆಕ್ಲಹೆಂಗನ್ 2ವಿಕೆಟ್ ಗಳಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT