ಕ್ರಿಕೆಟ್

ಐಪಿಎಲ್ 2018: ಚೆನ್ನೈ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಗೆ 34 ರನ್ ಜಯ

Raghavendra Adiga
ನವದೆಹಲಿ: ನವದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ  ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್ 34 ರನ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದೊಡನೆ 162 ರನ್ ಕಲೆ ಹಾಕಿತ್ತು.
ಡೆಲ್ಲಿ ಪರವಾಗಿ ರಿಷಬ್ ಪಂತ್ (38), ವಿಜಯ್ ಶಂಕರ್ (36), ಹರ್ಷಲ್ ಪಟೇಲ್ (36) ರನ್ ಕಲೆ ಹಾಕಿ ಉತ್ತಮ ಮುನ್ನಡೆ ತಂದುಕೊಟ್ಟರು.
ಚೆನ್ನೈ ಪರವಾಗಿ ಲುಂಗಿ ಎನ್ಗಿ 2 ವಿಕೆಟ್ ಕಬಳಿಸಿದರೆ ದೀಪಕ್ ಚಹಾರ್, ರವೀಂದ್ರ ಜಡೇಜಾ ಹಾಗೂ ಎಸ್. ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.
ಡೆಲ್ಲಿಯಿಂದ 163 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.
ಚೆನ್ನೈ ಪರವಾಗಿ ಅಂಬಟಿ ರಾಯಿಡು ಅರ್ಧ ಶತಕ (50) ದಾಖಲಿಸಿದರಾದರೂ ತಂಡದ ಸೋಲಿನಿಂದಾಗಿ ಅವರ ಶ್ರಮ ವ್ಯರ್ಥವಾಯಿತು. ಇವರ ಹೊರತಾಗಿ ರವೀಂದ್ರ ಜಡೇಜಾ (27), ಶೇನ್ ವ್ಯಾಟ್ಸನ್ (14), ಸುರೇಶ್ ರೈನಾ (15) ಹಾಗೂ ಎಂ.ಎಸ್. ಧೋನಿ (17) ಬಿರುಸಿನ ಆಟ್ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿ ವಿಫಲರಾದರು.
ಡೆಲ್ಲಿ ಡೇರ್ ಡೆವಿಲ್ಸ್ ನ ಪರವಾಗಿ ಟ್ರೆಂಟ್ ಬೌಲ್ಟ್, ಅಮಿತ್ ಮಿಶ್ರಾ ತಲಾ 2 ವಿಕೆಟ್ ಹಾಗೂ ಸಂದೀಪ್ ಎಲ್. ಹಾಗೂ ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಮುಇಂಚಿದರು.
SCROLL FOR NEXT