ಐಪಿಎಲ್ 2018: ಆರ್‌ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 30 ರನ್ ಜಯ
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2018 ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ವಿರುದ್ಧ 30 ರನ್ ಗಳಿಂದ ಪರಾಭವಗೊಂಡಿದೆ. ಇದರೊಡನೆ ಪ್ಲೇ ಆಫ್ ಗೆ ಪ್ರವೇಶಿಸುವ ಬೆಂಗಳೂರಿನ ಕನಸು ನುಚ್ಚು ನೂರಾಗಿದೆ.
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.
ರಾಜಸ್ತಾನ ಪರ ರಾಹುಲ್ ತ್ರಿಪಾಠಿ (80), ಅಜಿಂಕ್ಯ ರಹಾನೆ (33), ಕ್ಲಾಸೇನ್ (32 ), ಕೃಷ್ಣಪ್ಪ ಗೌತಮ್ (14), ರನ್ ಗಳಿಸಿದರೆ ಬೆಂಗಳೂರಿನ ಪರ ಉಮೇಶ್ ಯಾದವ್ 3 ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
ಸವಾಲಿನ ಮೊತ್ತವನ್ನು ಬೆನ್ನತ್ತಿದ ಆರ್‌ಸಿಬಿ 19.2 ಓವರ್ ಗಳಲ್ಲಿ 134 ರನ್ ಗಳಿಸಿಕೊಳ್ಳುವಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಬೆಂಗಳೂರು ಪರವಾಗಿ ಎಬಿಡಿ ವಿಲಿಯರ್ಸ್ (53), ಪಾರ್ಥಿವ್ ಪಟೇಲ್ (33), ಮಾತ್ರ ಉತ್ತಮ ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇವರ ಹೊರತು ಉಳಿದೆಲ್ಲರೂ ಇಪ್ಪತ್ತು ರನ್ ಗಳ ಗಡಿಯನ್ನೂ ತಲುಪಲಿಲ್ಲ.
ರಾಜಸ್ಥಾನದ ಪರವಾಗಿ ಶ್ರೀಯಾಸ್ ಗೋಪಾಲ್ ನಾಲ್ಕು, ಜಯದೇವ್ ಉನದ್ಕಟ್, ಬೆನ್ ಲಾಫ್ಲಿನ್ ತಲಾ ಎರಡು, ಕೆ. ಗೌತಮ್ ಹಾಗೂ ಇಶ್ ಸೋಧಿ ಒಂದೊಂದು ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics