ಐಪಿಎಲ್ 2018: ಮುಂಬೈ ವಿರುದ್ಧ ಡೆಲ್ಲಿಗೆ 11 ರನ್ ಜಯ 
ಕ್ರಿಕೆಟ್

ಐಪಿಎಲ್ 2018: ಮುಂಬೈ ವಿರುದ್ಧ ಡೆಲ್ಲಿಗೆ 11 ರನ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ , ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ 11 ರನ್​ಗಳ ಸೋಲನುಭವಿಸಿದೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ , ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ  11 ರನ್​ಗಳ ಸೋಲನುಭವಿಸಿದೆ. ಈ ಮೂಲಕ  ಮುಂಬಯಿ ಇಂಡಿಯನ್ಸ್ ತಾನು ಪ್ಲೇ ಆಫ್ ಗೆ ತೆರಳುವ ಅವಕಾಶವನ್ನು ಕಳೆದುಕೊಂಡಿದೆ.
ಡೆಲ್ಲಿ ಒಡ್ಡಿದ್ದ 175ರನ್ ಗುರಿ ಬೆನ್ನತ್ತಿದ ಮುಂಬೈ 9.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 163ರನ್ ಗಳಿಸಲಷ್ಟೇ ಸಾಧ್ಯವಾಗಿದೆ.
ಮುಂಬೈ ಪರವಾಗಿ ಲೆವೀಸ್​ (48) ಬಿಸಿಜೆ ಕಟ್ಟಿಂಗ್ (37), ಹಾರ್ದಿಕ್ ಪಾಂಡ್ಯ (27) ರನ್ ಗಳಿಸಿ ಮಿಂಚಿದರು  ಆದರೆ ಪಂದ್ಯದ ಕಡೆ ಗಳಿಗೆಯಲ್ಲಿ ಒಂದರ ಹಿಂದೊಂದರಂತೆ ವಿಕೆಟ್ ಪತನವಾದಗಿ ಹನ್ನೊಂದು ರನ್ ಗಳ ಹಿನ್ನಡೆ ಅನುಭವಿಸಿತು.
ದೆಹಲಿ ಪರವಾಗಿ ಲಮಿಖಾನೆ, ಮ್ಯಾಕ್ಸ್​ವೆಲ್​, ಮಿಶ್ರಾ ತಲಾ ಮೂರು ಮೂರು ವಿಕೆಟ್ ಕಬಳಿಸಿದ್ದರು.
ಇನ್ನು ಇದಕ್ಕೆ ಮುನ್ನ ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟದೊಡನೆ 174 ರನ್ ಗಳಿಸಿತ್ತು. ತಂಡ ದ ಪರವಾಗಿ ರಿಷಬ್ ಪಂತ್ 64, ಮ್ಯಾಕ್ಸ್ ವೆಲ್ 22, ವಿಜಯ್ ಶಂಕರ್ ಅಜೇಯ 43, ಅಭಿಶೇಖ್ ಶರ್ಮಾ 15 ರನ್ ಗಳಿಸಿದ್ದಾರೆ.
ಇನ್ನು ಮುಂಬೈ ಪರ ಪಾಂಡ್ಯ, ಬೂಮ್ರ, ಮಾರ್ಕಂಡೆ ತಲಾ ಒಂದೊಂದು ವಿಕೆಟ್​ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT