ಐಪಿಎಲ್ 2018: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಜಯ, ಪೇ ಆಫ್ ಗೆ ಲಗ್ಗೆ 
ಕ್ರಿಕೆಟ್

ಐಪಿಎಲ್ 2018: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಜಯ, ಪ್ಲೇ ಆಫ್ ಗೆ ಲಗ್ಗೆ

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಸಾಲಿನ ಟಿ 20 ಪಂದ್ಯಾವಳಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು.....

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಸಾಲಿನ ಟಿ 20 ಪಂದ್ಯಾವಳಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ  ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕೊತಾ ನೈಟ್ ರೈಡರ್ಸ್ ಪ್ಲೇ-ಆಫ್‌ ಸುತ್ತಿಗೆ ಪ್ರವೇಶ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್20.0 ಓವರ್ ಗಳಲ್ಲಿ 9  ವಿಕೆಟ್ ನಷ್ಟಕ್ಕೆ 172 ರನ್ ಬೃಹತ್ ಮೊತ್ತ ಕಲೆಹಾಕಿತ್ತು.
ಹೈದರಾಬಾದ್ ಪರ ಶಿಖರ್ ಧವನ್ (50), ಶ್ರೀವತ್ಸ ಗೋಸ್ವಾಮಿ (35), ಕೇನ್ ವಿಲಿಯಮ್ಸನ್ (36), ಮನೀಶ್ ಪಾಂಡೆ (25) ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ಕೋಲ್ಕತ್ತಾ ಪರವಾಗಿ ಪಿ. ಕೃಷ್ಣ 4 ವಿಕೆಟ್, ಗಳಿಇಸಿ ಮಿಂಚಿದರೆ ಆಂಡ್ರೆ ರಸೆಲ್, ಸುನಿಲ್ ನರೈನ್, ಜಾವೊನ್ ಸೀರ್ಲ್ಸ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಎದುರಾಳಿ ತಂಡ ಒಡ್ಡಿದ 173 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ದಿಟ್ಟ ಪ್ರದರ್ಶನ ನೀಡಿತ್ತು.
ಕೋಲ್ಕತ್ತಾ ತಂಡದ ಕ್ರಿಸ್ ಲಿನ್ 55 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರ ಜತೆಯಾದ ಇನ್ನೋರ್ವ ಆಟಗಾರ ರಾಬಿನ್ ಉತ್ತಪ್ಪ ಸಹ 45 ರನ್ ಕಲೆ ಹಾಕಿದ್ದರು. ಇನ್ನು ಸುನೀಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್ ಕ್ರಮವಾಗಿ 29 ಹಾಗೂ 26 ರನ್ ಗಳಿಸಿದ್ದರು.
ರಾಜಸ್ಥಾನದ ಪರವಾಗಿ ಸಿದ್ದಾರ್ಥ್ ಕೌಲ್ ಮತ್ತು ಕಾರ್ಲೋಸ್ ಬ್ರಾಥ್ವೈಟ್ 2, ವಿಕೆಟ್ ಕಬಳಿಸಿದರೆ ಶಕೀಬ್ ಅಲ್ ಹಸನ್ 1ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!