ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಐಪಿಎಲ್ 2018: ಪಂಜಾಬ್ ವಿರುದ್ಧ ಸಿಎಸ್​ಕೆಗೆ 5 ವಿಕೆಟ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಟಿ 20 ಕ್ರಿಕೆಟ್ ನ ಇಂದಿನ ನಿರ್ಣಾಯಕ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟುಗಳಿಂದ ಜಯ ಸಾಧಿಸಿದೆ.

ಐಪಿಎಲ್ 2018: ಪಂಜಾಬ್ ವಿರುದ್ಧ ಸಿಎಸ್​ಕೆಗೆ 5 ವಿಕೆಟ್ ಜಯ
Raghavendra Adiga
Updated On : 21 May 2018, 12:20 pm
ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಟಿ 20 ಕ್ರಿಕೆಟ್ ನ ಇಂದಿನ ನಿರ್ಣಾಯಕ ಹೋರಾಟದಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ 5  ವಿಕೆಟುಗಳಿಂದ ಜಯ ಸಾಧಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಟಾಸ್ ಗೆದ್ದಿರುವ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಹೀಗಾಗಿ ಮೊದಲಿಗೆ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ 19.4 ಓವರ್ ಗಳಲ್ಲಿ 153 ರನ್ ಗಳಿಸಿತು.

Advertisement

Advertisement

ಪಂಜಾಬ್ ಪರವಾಗಿ ಕರುಣ್ ನಾಯರ್ (54), ಮನೋಜ್ ತಿವಾರಿ (35), ಡೇವಿಡ್ ಮಿಲ್ಲರ್ (24) ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
ಚೆನ್ನೈ ಪರವಾಗಿ ಲುಂಗಿ ಎನ್‌ಗಿಡಿ ಮಾರಕ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಿತ್ತರೆ ಎಸ್. ಠಾಕೂರ್ ಹಾಗೂ ಬ್ರಾವೋ ತಲಾ 2 , ದೀಪಕ್ ಚಹಾರ್, ರವೀಂದ್ರ ಜಡೇಜಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ನೀಡಿದ್ದ ಸಾಧಾರಣ ಗುರಿಯನ್ನು ಬೆನ್ನತ್ತಿದ ಚೆನ್ನೈ  19.1 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯಭೇರಿ ಮೊಳಗಿಸಿತು.
ಸಿಎಸ್​ಕೆ ಪರವಾಗಿ ಸುರೇಶ್ ರೈನಾ ಅರ್ಧ ಶತಕ (61) ದಾಖಲಿಸಿದರೆ  ದೀಪಕ್​ ಚಾಹರ್​ 39 ರನ್​ ಪಡೆದರು.ಕಡೆಗಳಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ಧೋನಿ 16 ರನ್ ಪೇರಿಸುವ ಮೂಲಕ ತಂಡಕ್ಕೆ ಗೆಲುವಿನ ಸಿಹಿ ನೀಡಿದರು.
ಪಂಜಾಬ್ ಪರವಾಗಿ ಅಂಕಿತ್ ರಾಜಪೂತ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 1 ವಿಕಿಎಟ್ ಗಳಿಸಿದರು.
ಭಾರೀ ಅಂತರದಿಂದ ಗೆಲ್ಲುವ ಮೂಲಕ ಪ್ಲೇ ಆಫ್ ಗೆ ಪ್ರವೇಶಿಸುವ ಕನಸು ಕಂಡಿದ್ದ ಪಂಜಾಬ್ ಈ ಸೋಲಿನಿಂದ ತೀವ್ರ ನಿರಾಸೆಯುಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments