ಕ್ರಿಕೆಟ್

ಶ್ರೀಲಂಕಾ ಕ್ರಿಕೆಟಿಗ ಧನಂಜಯ್ ಡಿ. ಸಿಲ್ವಾ ತಂದೆ ದುಷ್ಕರ್ಮಿಗಳ ಗುಂಡಿಗೆ ಬಲಿ

Raghavendra Adiga
ಕೊಲಂಬೋ (ಶ್ರೀಲಂಕಾ): ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಧನಂಜಯ್  ಡಿ. ಸಿಲ್ವಾ ಅವರ ತಂದೆಯನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಸ್ಥಳೀಯ ರಾಜಕೀಯ ಮುಖಂಡರಾಗಿದ್ದ ರಂಜನ್ ಹತ್ಯೆಗಿಡಾಗಿದ್ದು ಕೊಲಂಬೊದ ರತ್ಮಾಲನ ಬಳಿ ಗುರುವಾರ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
 26 ವರ್ಷದ ಡಿ ಸಿಲ್ವಾ ತಂದೆಯ ಮರಣದ ಕಾರಣದಿಂದ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ  ಈ ಸಂಬಂಧ ಪ್ರತಿಕ್ರಯಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಘಟನೆಯಿಂದ ಆಘಾತವಾಗಿದೆ. ಧನಂಜಯ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ, ಧನಂಜಯ್ ಅವರಿಗೆ ಅಗತ್ಯವಾದ ಎಲ್ಲಾ ನೆರವನ್ನೂ ನಿಡಲು ಮಂಡಳಿ ಸಿದ್ದವಿದೆ. ಎಂದು ತಿಳಿಸಿದೆ.
SCROLL FOR NEXT