ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್?
ಕಳೆದ ವರ್ಷ ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಪಿಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ...
ನವದೆಹಲಿ: ಕಳೆದ ವರ್ಷ ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಪಿಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಪಿಚ್ ಫಿಕ್ಸರ್ ಒಬ್ಬ ಕತಾರ್ ಮೂಲದ ಅಲ್ ಜಜೀರ್ ಟಿವಿ ನೆಟ್ ವರ್ಕ್ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ತಾನು ಗಾಲೆ ಗ್ರೌಂಡ್ ವುನ್ ಗೆ ಲಂಚ ನೀಡಿ ಪಿಚ್ ತಿದ್ದುಪಟಿ ಮಾಡಿಸಿದ್ದೆ ಎಂದು ಹೇಳಿರುವುದು ಇದೀಗ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಶಂಕಿತ ಮ್ಯಾಚ್ ಫಿಕ್ಸರ್ ಎನ್ನಲಾಗಿರುವ ಮುಂಬೈಯ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಾಬಿನ್ ಮೋರಿಸ್, ಗಾಲೆ ಗ್ರೌಂಡ್ ವುನ್ ಒಬ್ಬನಿಗೆ ಹಣ ನೀಡಿ ಪಿಚ್ ತಿರುಚಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಈ ಬಗ್ಗೆ ತನಿಖೆ ಆರಂಭಿಸಿದೆ.
ಕಳೆದ ವರ್ಷ ಟೀಂ ಇಂಡಿಯಾ ಮತ್ತು ಲಂಕಾ ಟೆಸ್ಟ್ ಸರಣಿಯ ಪಂದ್ಯ ಜುಲೈ 26ರಿಂದ 29ರವರೆಗೆ ಗಾಲೆಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 304 ರನ್ ಗಳಿಂದ ಜಯ ಗಳಿಸಿತ್ತು.