ರವೀಂದ್ರ ಜಡೇಜಾ, ಎಂಎಸ್ ಧೋನಿ, ವಿರಾಟ್ ಕೊಹ್ಲಿ
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಸ್ಪೆಲ್ ಮಾಡಿದ್ದರು. ಜಡೇಜಾ ತಮ್ಮ ನಾಲ್ಕನೇ ಓವರ್ ನಲ್ಲಿ ಹೆಟ್ಮರ್ ರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ವೇಳೆ ಔಟ್ ಗಾಗಿ ಜಡೇಜಾ ಅಂಪೈರ್ ಗೆ ಮನವಿ ಸಲ್ಲಿಸಿದರು. ಆದರೆ ಅಂಪೈರ್ ನಾಟ್ ಔಟ್ ನೀಡಿದರು.
ಎಲ್ಬಿಡಬ್ಯ್ಲೂ ಔಟ್ ಕುರಿತಂತೆ ನಿಖರವಾಗಿದ್ದ ರವೀಂದ್ರ ಜಡೇಜಾ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಕೆಲ ಸೆಕೆಂಡ್ ಚರ್ಚಿಸಿದ ಬಳಿಕ ವಿರಾಟ್ ಕೊಹ್ಲಿ ಡಿಆರ್‌ಎಸ್ ಗೆ ಮನವಿ ಮಾಡಿದರು. ಡಿಆರ್ಎಸ್ನಲ್ಲಿ ಔಟ್ ಎಂದು ತೀರ್ಪು ಬಂದಿದ್ದು ರವೀಂದ್ರ ಜಡೇಜಾ ಖುಷಿಯಲ್ಲಿ ಮಿಂದೆದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics