ಕ್ರಿಕೆಟ್

ಮಿ.ಕೂಲ್ ಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ: ಧೋನಿ ಬೆಂಬಲಕ್ಕೆ ನಿಂತ ನೆಹ್ರಾ

Srinivasamurthy VN
ನವದೆಹಲಿ: ಮಿ.ಕೂಲ್ ಎಂಎಸ್ ಧೋನಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ವೇಗೆ ಆಶಿಶ್ ನೆಹ್ರಾ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಆಶಿಶ್ ನೆಹ್ರಾ, ಮಹೇಂದ್ರ ಸಿಂಗ್ ಧೋನಿ ಅವರಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಧೋನಿ ತಂಡದಲ್ಲಿದ್ದರೆ ವಿರಾಟ್ ಕೊಹ್ಲಿಗೆ ಅನುಕೂಲವಾಗಲಿದೆ. ಹಾಗೆಯೇ ಆಸ್ಟ್ರೇಲಿಯಾ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ. ರಿಷಭ್ ಪಂತ್, ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಆಡಿರಬಹುದು. ಧೋನಿಗೆ ಅವರೆಲ್ಲಾ ಸಾಟಿಯಾಗಲಾರರು. ಜತೆಗೆ ಇವರೆಲ್ಲಾ ಧೋನಿಯ ಹತ್ತಿರವೂ ಸುಳಿಯಲಾರರು. ಧೋನಿ ಕ್ರಿಕೆಟಿಗನಾಗಿ ಮಾತ್ರವಲ್ಲ. ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಮುಖ್ಯವಾಗಿ ನಾಯಕ ವಿರಾಟ್ ಕೊಹ್ಲಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಏಷ್ಯಾಕಪ್ ಹಾಗೂ ಇತ್ತೀಚಿನ ಸರಣಿಗಳಲ್ಲಿ ಧೋನಿ ಉತ್ತಮವಾಗಿ ಆಡದೇ ಇರಬಹುದು ಆದರೆ, ಇನ್ನೆರಡು ತಿಂಗಳು ಬಳಿಕ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಫಾರ್ಮ್ ಗೆ ಮರಳಲಿದ್ದಾರೆ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.
ಧೋನಿ 2018ರಲ್ಲಿ ಒಟ್ಟು 18 ಪಂದ್ಯಗಳನ್ನಾಡಿ 25.20 ಸರಾಸರಿಯಲ್ಲಿ ಕೇವಲ 252 ರನ್ ಸಿಡಿಸಿದ್ದಾರೆ. ಈ ವರ್ಷ ಧೋನಿ ಬ್ಯಾಟ್ ನಿಂದ ಒಂದೇ ಒಂದು ಅರ್ಧಶತಕ ಕೂಡಾ ಸಿಡಿದಿಲ್ಲ. ಹೀಗಾಗಿಯೇ ಧೋನಿ ಅವರನ್ನು ಟಿ20 ಟೀಂ ಇಂಡಿಯಾದಿಂದ ಹೊರಗಿಡಲಾಗಿದೆ.
SCROLL FOR NEXT