ನವದೆಹಲಿ: ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಹಿಂದಿಕ್ಕಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀ ಇಂಡಿಯಾ ಐದು ವಿಕೆಟ್ ಗಳಿಂದ ಜಯ ಗಳಿಸಿತ್ತು. ಇದು ರೋಹಿತ್ ಶರ್ಮಾ ಮುನ್ನಡೆಸಿರುವ ಮೊದಲ 10 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾದ 9ನೇ ಗೆಲುವಾಗಿತ್ತು. ಈ ಮೂಲಕ ಕೊಹ್ಲಿ ಜೊತೆಗೆ ಪಾಕಿಸ್ತಾನದ ಶೋಯಿಬ್ ಮಲಿಕ್, ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಇನ್ನು ಹಲವರ ದಾಖಲೆಯನ್ನು ಮುರಿದಿದ್ದಾರೆ.
ನಾಯಕತ್ವ ವಹಿಸಿದ ಮೊದಲ 10 ಪಂದ್ಯಗಳಲ್ಲಿ ಅತೀ ಹೆಚ್ಚು ಗೆಲುವಿನ ಫಲಿತಾಂಶ ದಾಖಲಿಸಿದವರ ಪೈಕಿ ರೋಹಿತ್ ನಂಬರ್ 1 ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.