ಕ್ರಿಕೆಟ್

2ನೇ ಟಿ-20: ವಿರಾಟ್ ಕೊಹ್ಲಿ ದಾಖಲೆ ಮುರಿದ ಹಿಟ್‌ ಮ್ಯಾನ್ ರೋಹಿತ್ ಶರ್ಮಾ

Lingaraj Badiger
ಲಖನೌ: ಹಿಟ್ ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರು ದಾಖಲೆಗಳ ಸರದಾರ, ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದು ಮಂಗಳವಾರ ನೂತನ ದಾಖಲೆ ಬರೆದಿದ್ದಾರೆ.
ಲಖನೌನ ಅಟಲ್ ಬಿಹಾರಿ ಪಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ ಅವರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಕೊಹ್ಲಿ ದಾಖಲೆ ಮುರಿಯಲು ಕೇವಲ 10 ರನ್‌ಗಳ ಅವಶ್ಯಕತೆಯಿತ್ತು. ಒಶಾನ್ ಥಾಮಸ್ ಓವರ್‌ನಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ರೋಹಿತ್ ಶರ್ಮಾ ಈ ದಾಖಲೆ ಬರೆದರು. ವಿರಾಟ್ ಕೊಹ್ಲಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.
ಟಿ-20ರನ್ ಗಳ ವಿವರ
ರೋಹಿತ್ ಶರ್ಮಾ: ಪಂದ್ಯ 86: ರನ್: 2103* 
ವಿರಾಟ್ ಕೊಹ್ಲಿ: ಪಂದ್ಯ 62: ರನ್: 2102 
ಸುರೇಶ್ ರೈನಾ: ಪಂದ್ಯ 78: ರನ್: 1605 
ಎಂಎಸ್ ಧೋನಿ: ಪಂದ್ಯ 93: ರನ್: 1487 
ಯುವರಾಜ್ ಸಿಂಗ್ ಪಂದ್ಯ 58: ರನ್: 1177 
SCROLL FOR NEXT