ನವದೆಹಲಿ:ವಿಶ್ವಕಪ್ಹಿನ್ನೆಲೆಯಲ್ಲಿ ಮುಂದಿನ ವರ್ಷಐಪಿಎಲ್ ಪಂದ್ಯಾವಳಿಗಳಲ್ಲಿ ವೇಗದಬೌಲರ್ ಗಳಿಗೆ ವಿಶ್ರಾಂತಿನೀಡಬೇಕೆಂದು ಟೀಂ ಇಂಡಿಯಾ ನಾಯಕವಿರಾಟ್ ಕೊಹ್ಲಿ ಪ್ರಸ್ತಾಪಿಸಿದ್ದಾರೆ.ಆದರೆ.ಕೊಹ್ಲಿಅವರ ಚಿಂತನೆಗೆ ಆಡಳಿತಾತ್ಮಕಮಂಡಳಿ ಸಭೆಯಲ್ಲಿ ಪ್ರಾಂಚೈಸಿಗಳುಬೆಂಬಲಿಸಿಲ್ಲ.
ಹೈದ್ರಾಬಾದಿನಲ್ಲಿಇತ್ತೀಚಿಗೆ ನಡೆದ ಆಡಳಿತಾತ್ಮಕ ಮಂಡಳಿ ಸಭೆಯಲ್ಲಿ ಮುಂದಿನ ವರ್ಷನಡೆಯಲಿರುವ ವಿಶ್ವಕಪ್ ಕ್ರಿಕೆಟ್ಹಿನ್ನೆಲೆಯಲ್ಲಿ ಜಸ್ಪ್ರೀಟ್ಬೂಮ್ರಾ, ಭುವನೇಶ್ವರ್ಕುಮಾರ್,ಅವರಂತಹವೇಗಿಗಳಿಗೆ ಐಪಿಲ್ ಪಂದ್ಯಗಳಿಂದ ವಿಶ್ರಾಂತಿ ನೀಡುವಂತೆ ಸಲಹೆನೀಡಿದ್ದಾರೆ.
ಆದಾಗ್ಯೂ,ಕೊಹ್ಲಿಅವರ ಪ್ರಸ್ತಾಪಕ್ಕೆ ಹಲವರು ಬೆಂಬಲವ್ಯಕ್ತಪಡಿಸಿಲ್ಲ.ಪ್ರಾಂಚೈಸಿಗಳು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲಎಂದು ಮಂಡಳಿ ಅಧಿಕಾರಿಗಳುಹೇಳಿದ್ದಾರೆ.
ಮಾರ್ಚ್29 ರಿಂದಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು,ಮೇ.19 ರಂದುಮುಕ್ತಾಯಗೊಳ್ಳಲಿವೆ. ಜೂನ್5 ರಂದುದಕ್ಷಿಣ ಆಫ್ರಿಕಾ ವಿರುದ್ಧದಮೊದಲ ವಿಶ್ವಕಪ್ ಪಂದ್ಯ ನಡೆಯಲಿದ್ದು,15 ದಿನಗಳಷ್ಟೇವಿಶ್ರಾಂತಿ ದೊರೆಯಲಿದೆ.ಆದ್ದರಿಂದವೇಗಿಗಳಿಗೆ ಇಡೀ ಐಪಿಎಲ್ ಪಂದ್ಯಗಳಿಂದಕೈ ಬಿಡುವ ಅವಕಾಶ ಇಲ್ಲ ಎಂದುಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯಅಧಿಕಾರಿಗಳು ಹೇಳಿದ್ದಾರೆ.
ಒಂದುವೇಳೆ ಮುಂಬೈ ಇಂಡಿಯನ್ಸ್ ಫ್ಲೇಆಫ್ ಅಥವಾ ಫೈನಲ್ ತಲುಪಿದರೆ ಬೂಮ್ರಾ ಅವರನ್ನು ಕೈ ಬಿಡುವುದಕ್ಕೆಆಗುವುದಿಲ್ಲ ಎಂದು ಸಭೆಯಲ್ಲಿಪಾಲ್ಗೊಂಡಿದ್ದ ಉಪ ನಾಯಕ ರೋಹಿತ್ಶರ್ಮಾ ಅವರು ಹೇಳಿದ್ದಾರೆ.ಇಡೀಐಪಿಎಲ್ ಪಂದ್ಯಗಳಿಂದ ಎಲ್ಲಾವೇಗಿಗಳಿಗೆ ವಿಶ್ರಾಂತಿ ನೀಡುವುದುಅಸಾಧ್ಯವಾದದ್ದು ಎಂದು ಮತ್ತೊಬ್ಬಅಧಿಕಾರಿ ತಿಳಿಸಿದ್ದಾರೆ.
ಭುವನೇಶ್ವರ್ಕುಮಾರ್,ಬೂಮ್ರಾ,ಶಮಿ,ಉಮೇಶ್, ಖಲೀಲ್ ಎಲ್ಲಾ ಐಪಿಎಲ್ ಪಂದ್ಯಗಳಲ್ಲಿಆಡುವ ಸಾಧ್ಯತೆ ಕಡಿಮೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos