ಕ್ರಿಕೆಟ್

ಮಾನವೀಯತೆ ಮೆರೆದ ಟೀಂ ಇಂಡಿಯಾ ನಾಯಕಿಗೆ ಅಭಿನಂದನೆಗಳ ಮಹಾಪೂರ

Srinivasamurthy VN
ಗಯಾನಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಜೈತ್ರ ಯಾತ್ರೆ ಮುಂದುವರೆದಿರುವಂತೆಯೇ ಇತ್ತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ತಮ್ಮ ಮಾನವೀಯತೆಯ ಮೂಲಕ ಇದೀಗ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಭಾರತದ ಟ್ವೆಂಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಭಾರತ-ಪಾಕ್ ನಡುವೆ ಭಾನುವಾರ ಪಂದ್ಯದ ವೇಳೆ ಮೈದಾನದಲ್ಲೇ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಹರ್ಮನ್ ಪ್ರೀತ್ ಕೌರ್ ಎತ್ತಿಕೊಂಡು ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಈ ಘಟನೆ ಅಲ್ಲಿ ನೆರೆದಿದ್ದ ಭಾರತೀಯ ಅಭಿಮಾನಿಗಳನ್ನು ಮಾತ್ರವಲ್ಲ ಬದಲಿಗೆ ಪಾಕಿಸ್ತಾನದ ಅಭಿಮಾನಿಗಳ ಹೃಗದಯವನ್ನೂ ಗೆದ್ದಿದೆ.
ಆಗಿದ್ದೇನು?
ಪಂದ್ಯ ಆರಂಭಕ್ಕೆ ಮೊದಲು ಉಭಯ ದೇಶಗಳ ರಾಷ್ಟ್ರಗೀತೆ ಮೊಳಗಿಸಲಾಯಿತು. ರಾಷ್ಟ್ರಗೀತೆ ಮೊಳಗಿದ ಬಳಿಕ ಭಾರತದ ಆಟಗಾರ್ತಿ ಕೌರ್ ಬಳಿ ಬಂದ ಪುಟಾಣಿ ಬಾಲಕಿಯೊಬ್ಬಳು ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಳು. ಆಗ ಕೌರ್ ತನ್ನ ತೋಳಿನಿಂದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಅಧಿಕಾರಿಗಳ ಕೈಗೆ ಒಪ್ಪಿಸಿದರು. ಮೈದಾನದಲ್ಲಿ ಬಾಲಕಿಯನ್ನು ಕೌರ್ ಎತ್ತಿಕೊಂಡು ಹೋಗುವ ವಿಡಿಯೋ ಇದೀಗ ವೈರಲ್ ಆಗಿದೆ. ಕೌರ್ ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗಿದೆ. ಹರ್ಮನ್ ಪ್ರೀತ್ ಕಾರ್ಯಕ್ಕೆ ಅಭಿಮಾನಿಗಳು ಮೈದಾನದಲ್ಲೇ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
SCROLL FOR NEXT