ಕ್ರಿಕೆಟ್

ಆಸ್ಟ್ರೇಲಿಯಾ ಪರಿಸ್ಥಿತಿಗೆ ಹೊಂದಿಕೊಳ್ಳುವ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಭಾರತಕ್ಕೆ ಕಾಡಲಿದೆ- ಮೈಕ್ ಹಸ್ಸಿ

Nagaraja AB

ನವದೆಹಲಿ: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕಾಡಲಿದೆ ಎಂದು ಆಸ್ಟ್ರೇಲಿಯಾದ ಆಟಗಾರ ಮೈಕ್ ಹಸ್ಸಿ ಹೇಳಿದ್ದಾರೆ.

ಅಡಿಲೇಡ್ ನಲ್ಲಿ ಡಿಸೆಂಬರ್ 6 ರಿಂದ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ದುಬೈನಲ್ಲಿ  ನಡೆದ ಏಷ್ಯಾ ಕಪ್  ಟೂರ್ನಿ ವೇಳೆಯಲ್ಲಿ ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಪ್ರತಿಭಾವಂತ ಆಟಗಾರರಾಗಿದ್ದು, ಅವರ ಆಟದ ಶೈಲಿ ಆಸ್ಟ್ರೇಲಿಯಾದ ಪರಿಸ್ಥಿತಿ ಹೊಂದಾಣಿಕೆಯಾಗುವಂತಿದೆ. ಆಲ್ ರೌಂಡರ್ ಆಗಿ ತಂಡವನ್ನು ಸಮತೂಕದಲ್ಲಿ ಕೊಂಡೊಯ್ಯುವ ಶಕ್ತಿ ಅವರಿಗಿದೆ.  ಅವರ ಅನುಪಸ್ಥಿತಿ ಭಾರತ ತಂಡಕ್ಕೆ ಸಮಸ್ಯೆಯಾಗುವ  ಸಾಧ್ಯತೆ ಇದೆ ಎಂದು ಮೈಕಲ್ ಹಸ್ಸಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಉತ್ತಮ ಆಟ ಪ್ರದರ್ಶಿಸಲು ಅವಕಾಶವಿದೆ. ಆದರೆ. ಆಸ್ಟ್ರೇಲಿಯಾದ ಕೆಲ ಯುವ ಬೌಲರ್ ಗಳು ಭಾರತ ತಂಡದ ವಿರುದ್ಧ ದಾಳಿ  ನಡೆಸಲಿದ್ದಾರೆ.  ಭಾರತದ ಪೃಥ್ವಿ ಶಾ, ರಿಷಭ್ ಪಂತ್, ಹನುಮ ವಿಹಾರಿ ಅಂತಹ ಆಟಗಾರರನ್ನು ಮಿಚ್ಚೆಲ್ ಸ್ಟಾರ್ಕ್, ಜೊಸ್ ಹ್ಯಾಜ್ಲಿವುಡ್ , ನ್ಯಾಥನ್ ಯಾನ್ ಮೊದಲ ಬಾರಿಗೆ ಎದುರಿಸುತ್ತಿದ್ದಾರೆ .ತವರೂ ನೆಲದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ  ವಿಶ್ವಾಸ ಇರುವುದಾಗಿ ಮೈಕ್ ಹಸ್ಸಿ  ಹೇಳಿದ್ದಾರೆ.

SCROLL FOR NEXT