ಪೃಥ್ವಿ ಶಾ 
ಕ್ರಿಕೆಟ್

ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಪೃಥ್ವಿ ಶಾಗೆ ವಿಚಿತ್ರವಾಗಿ ಶುಭ ಕೋರಿ ಕಾಲೆಳೆದ ಕಾಂಡೋಮ್ ಕಂಪನಿ!

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ ಪೃಥ್ವಿ ಶಾಗೆ ಕಾಂಡೋಮ್ ಕಂಪೆನಿಯೊಂದು ತನ್ನದೇ ಶೈಲಿಯಲ್ಲಿ ಶುಭ ಕೋರಿದ್ದು ಈ ಟ್ವೀಟ್ ಇದೀಗ ಸಖತ್ ವೈರಲ್ ಆಗಿದೆ...

ನವದೆಹಲಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ ಪೃಥ್ವಿ ಶಾಗೆ ಕಾಂಡೋಮ್ ಕಂಪೆನಿಯೊಂದು ತನ್ನದೇ ಶೈಲಿಯಲ್ಲಿ ಶುಭ ಕೋರಿದ್ದು ಈ ಟ್ವೀಟ್ ಇದೀಗ ಸಖತ್ ವೈರಲ್ ಆಗಿದೆ. 
ಶತಕ ವೀರ ಪೃಥ್ವಿ ಶಾಗೆ ಡ್ಯುರೆಕ್ಸ್ ಕಾಂಡೋಮ್ ಕಂಪನಿ ಶುಭಾಶಯ ತಿಳಿಸುವ ಮೂಲಕ ಹಿತವಾಗಿ ಕಾಲೆಳೆಯುವ ಪ್ರಯತ್ನವನ್ನು ಮಾಡಿದೆ. ಈಗ ಪೃಥ್ವಿ ಶಾಗೆ 'ಮೊದಲ ಪ್ರಯತ್ನ ಯಾವಾಗಲೂ ಅತ್ಯಂತ ವಿಶೇಷವಾಗಿರುತ್ತದೆ. ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ' ಅಂತಾ ಶುಭಾಶಯ ತಿಳಿಸಿ ಟ್ವೀಟ್ ಮಾಡಿದೆ ಈ ಟ್ವೀಟ್ ಇದೀಗ ವೈರಲ್ ಆಗಿದೆ. 
ಈ ಹಿಂದೆ ಸಹ ಡ್ಯುರೆಕ್ಸ್ ಕಾಂಡೋನ್ ಕಂಪನಿ ಬಾಲಿವುಡ್ ತಾರೆ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಮದುವೆ ಸಂದರ್ಭದಲ್ಲಿ ತಮಾಷೆ ಮಾಡಿತ್ತು. ಇನ್ನು ವಿರುಷ್ಕಾ ಸಾಂಸರಿಕಾ ಜೀವನಕ್ಕೆ ಕಾಲಿರಿಸಿದ್ದಾಗ ಡ್ಯುರೆಕ್ಸ್ ಹೊರತುಪಡಿಸಿ ನಿಮ್ಮಿಬ್ಬರ ಮಧ್ಯೆ ಏನು ಬರಬಾರದು ಎಂದು ಕಾಲೆಳೆದು ಮದುವೆಗೆ ವಿಶ್ ಮಾಡಿತ್ತು. 
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ಮಾಡಿ 154 ಎಸೆತಗಳಲ್ಲಿ 19 ಬೌಂಡರಿ ಸೇರಿದಂತೆ 134 ರನ್ ಬಾರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ