ಕ್ರಿಕೆಟ್

ಪೃಥ್ವಿ ಶಾರಲ್ಲಿ ಈ 3 ಲೆಜೆಂಡ್ ಆಟಗಾರರ ಅಂಶವಿದೆ: ಕೋಚ್ ರವಿಶಾಸ್ತ್ರಿ

Srinivas Rao BV
ಹೈದರಾಬಾದ್: ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಅತ್ಯಂತ ಹೆಚ್ಚು ಸುದ್ದಿ ಮಾಡುತ್ತಿದ್ದು, ರವಿ ಶಾಸ್ತ್ರಿ ಯುವ ಕ್ರಿಕೆಟಿಗನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪೃಥ್ವಿ ಶಾ ಅವರ ಆಟದ ಶೈಲಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಆತನಲ್ಲಿ ನನಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೆಹ್ವಾಗ್, ಹಾಗೂ ಲೆಜೆಂಡ್ ಲಾರಾ ಅವರ ಅಂಶಗಳನ್ನು ಕಂಡಿದ್ದೆನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೃಥ್ವಿ ಶಾ ಕ್ರಿಕೆಟ್ ಆಡುವುದಕ್ಕಾಗಿಯೇ ಹುಟ್ಟಿದ್ದಾನೆಂಬಂತೆ ಪ್ರದರ್ಶನ ನೀಡುತ್ತಿದ್ದಾನೆ. ಆತ 8 ವರ್ಷದವನಾಗಿದ್ದಾಗಿನಿಂದಲೂ ಕ್ರಿಕೆಟ್ ಆಡುತ್ತಿದ್ದು, ಎಲ್ಲಾ ರೀತಿಯಲ್ಲೂ ಕಠಿಣ ಪರಿಶ್ರಮ ಹಾಕಿದ್ದಾನೆ. ಆತನಲ್ಲಿ ಸಚಿನ್, ವಿರೇಂದ್ರ ಸೆಹ್ವಾಗ್, ಲಾರಾ ಅವರ ಅಂಶಗಳಿವೆ ಎಂದು ಹೇಳಿದ್ದಾರೆ. 

ಪೃಥ್ವಿ ಶಾ ತನಗೆ ಬಂದಿದ್ದ ಅವಕಾಶವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂದಿದ್ದಾರೆ. ಆತ ವಿನಯ, ಬದ್ಧತೆಯನ್ನು ಉಳಿಸಿಕೊಂಡಿದ್ದೇ ಆದಲ್ಲಿ ಉಜ್ವಲ ಭವಿಷ್ಯವಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದಿದ್ದು ಪೃಥ್ವಿ ಶಾ ಕ್ರಿಕೆಟ್ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
SCROLL FOR NEXT