ಸ್ಟುವರ್ಟ್ ಲಾ 
ಕ್ರಿಕೆಟ್

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಎರಡು ಪಂದ್ಯಗಳಿಂದ ಕೋಚ್ ಸ್ಟುವರ್ಟ್ ಲಾ ಔಟ್ !

ಐಸಿಸಿ ನಿಂತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಭಾರತ ವಿರುದ್ಧ ಮುಂದಿನ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ ಇಂಡೀಸ್ ತರಬೇತುದಾರ ಸ್ಟುವರ್ಟ್ ಲಾ ಅವರನ್ನು ಅಮಾನತುಗೊಳಿಸಲಾಗಿದೆ.

ದುಬೈ: ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ  ಟೆಸ್ಟ್  ಪಂದ್ಯದ ವೇಳೆಯಲ್ಲಿ ಐಸಿಸಿ ನಿಂತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ  ಭಾರತ ವಿರುದ್ಧ ಮುಂದಿನ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ ಇಂಡೀಸ್ ತರಬೇತುದಾರ ಸ್ಟುವರ್ಟ್ ಲಾ ಅವರನ್ನು ಅಮಾನತುಗೊಳಿಸಲಾಗಿದೆ.

ವೈಯಕ್ತಿಕವಾಗಿ ಆಟಗಾರರನ್ನು ಬೆಂಬಲಿಸುವ ಮೂಲಕ  ಐಸಿಸಿ ನೀತಿ ಸಂಹಿತೆ ಲೆವೆಲ್ -2ನ್ನು ಸ್ಟುವರ್ಟ್ ಲಾ ಉಲ್ಲಂಘಿಸಿದ್ದು, ತಪಿತಸ್ಥರೆಂದು ಕಂಡುಬಂದಿದ್ದಾರೆ.

ಎರಡನೇ ಇನ್ನಿಂಗ್ಸ್ ನ ಮೂರನೇ ದಿನದ ಪಂದ್ಯದಲ್ಲಿ  ವೆಸ್ಟ್ ಇಂಡೀಸ್  ಎಡಗೈ  ಬ್ಯಾಟ್ಸ್ ಮನ್ ಕೆ. ಪೊವೆಲ್  ಔಟಾದಾಗ ಸ್ಟುವರ್ಟ್ ಲಾ ಟಿವಿ ಅಂಪೈಯರ್ ಕೊಠಡಿಗೆ ತೆರಳಿ ಅಸಮರ್ಪಕವಾಗಿ ಟೀಕೆ ಮಾಡಿದ್ದರು. ನಂತರ ನಾಲ್ಕನೇ ಅಂಪೈರ್  ಬಳಿಗೂ ತೆರಳಿ ಆಟಗಾರರ ಸಮ್ಮುಖದಲ್ಲಿಯೇ  ಸೂಕ್ತವಲ್ಲದ ರೀತಿಯಲ್ಲಿ ಟೀಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಟುವರ್ಟ್ ಲಾ ಅವರನ್ನು ಇದೇ  ತಿಂಗಳ 21 ಮತ್ತು 24 ರಂದು  ಕ್ರಮವಾಗಿ ಗುವಾಹಟಿ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಂದ ಅಮಾನತುಗೊಳಿಸಲಾಗಿದ್ದು,  ಪಂದ್ಯದ ಶೇ, 25 ರಷ್ಟು ದಂಡ ವಿಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಪ್ರಕರಣ; ಮೂವರ DNA ಹೊಂದಾಣಿಕೆ ದೃಢ- FSL ವರದಿ

ಚೆನ್ನಮ್ಮ ಉತ್ತರ ಕ್ರಿಯಾದಿ: ಸಮಾಧಿ ಮುಂದೆ ಪತ್ನಿ ನೆನೆದು ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ

ಕರ್ನಾಟಕಕ್ಕೆ CWRC ನಂತರ CWMA ಶಾಕ್; ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ

ಕಣಕಣದಲ್ಲೂ ಸಮಾಜಘಾತುಕತನ; ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ? ಪ್ರಿಯಾಂಕ್ ಖರ್ಗೆ

CJP ಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಹಿಂಪಡೆದ ದೆಹಲಿ ಸರ್ಕಾರ; ಆದ್ರೆ ಕ್ರಿಮಿನಲ್‌ಗಳಿಗೆ ಶಾಕ್!