ಕ್ರಿಕೆಟ್

ಭಾರತ ಕ್ರಿಕೆಟ್ ನಲ್ಲಿ ನೂತನ ದಾಖಲೆ! ರಾಷ್ಟ್ರೀಯ ಅಂಪೈರ್ ಆಗಿ ಆಯ್ಕೆಯಾದ ವೃಂದಾ ರತಿ

Raghavendra Adiga
ನವದೆಹಲಿ: ಮುಂಬೈ ಮೂಲದ ವೃಂದಾ ರತಿ ಹಾಗೂ ನ್ನೈಯ ಎನ್.ಜನನಿ ಜೊತೆಗೂಡಿ ಭಾರತೀಯ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರು ಅಂಪೈರ್ ಹ್ಯಾಟ್ ಧರಿಸುತ್ತಿದ್ದಾರೆ.
ಈ ಇಬ್ಬರೂ ಬಿಸಿಸಿಐ ರಾಷ್ಟ್ರೀಯ ಮಟ್ಟದ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮುಖೇನ ಮಹಿಳಾ ಜೋಡಿಯು ಮಹಿಳಾ ಕ್ರಿಕೆಟ್ ಪಂದ್ಯ ಹಾಗೂ  ಜೂನಿಯರ್-ಮಟ್ಟದ ಪುರುಷರ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾಣಿಸಿಕೊಳ್ಳಲಿದೆ.
ನವಿ ಮುಂಬೈ ಮೂಲದ ಫಿಟ್ನೆಸ್ ತರಬೇತುಗಾರ್ತಿ 29ರ ಹರೆಯದ ವೃಂದಾ ರತಿ 2010ರಿಂದ ಬಿಸಿಸಿಐ ಸ್ಕೋರರ್ ಆಗಿದ್ದಾರೆ. ಹಲವು ಸ್ಥಳೀಯ ಪಂದ್ಯಗಳನ್ನು ಅಂಪೈರಿಂಗ್ ಮಾಡಿರುವ ವೃಂದಾ ರತಿ ಅಂಪೈರಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.  "ಆರಂಭದಲ್ಲಿ, ಮಹಿಳಾ ಅಂಪೈರ್ ಬಗ್ಗೆ ಸಾಕಷ್ಟು ಅಸಮಾಧಾನಗಳಿತ್ತು. ಆದರೆ ನಿಮ್ಮ ಸಾಮರ್ಥ್ಯದ ಅರಿವು ನಿಮಗಿದ್ದಾಗ ನಿಮ್ಮ ಲಿಂಗವೆನ್ನುವುದು ಅಪ್ರಸ್ತುತವಾಗುತ್ತದೆ" ಅವರು ಹೇಳಿದ್ದಾರೆ.
ಮಹಿಳೆಯಲ್ಲಿನ ತಾಳ್ಮೆ ಸ್ವಭಾವ, ಅತಿಯಾದ ಬಿಗಿ ಸ್ವಭಾವವಲ್ಲದಿರುವಿಕೆಯು ಆಕ್ ಅಂಪೈರಿಂಗ್ ಮಾಡುವಾಗ ಸಹಾಯಕ್ಕೆ ಬರಲಿದೆ ಎನ್ನುವು ವೃಂದಾ ಮಾತು. ಅಹಂಕಾರವಿದ್ದರೆ ಅಂಪೈರಿಂಗ್ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
SCROLL FOR NEXT