ಗುವಾಹಟಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಬೌಂಡರಿಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ.
ಹೌದು.. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಿಡಿಸಿದ ಶತಕಗಳು ಭಾರತದ ಗೆಲುವಿನ ಪ್ರಮುಖ ಪಾತ್ರವಹಿಸಿದ್ದವು. ಪ್ರಮುಖವಾಗಿ ರೋಹಿತ್ ಶರ್ಮಾರ ಅಜೇಯ 152 ರನ್ ಭಾರತಕ್ಕೆ ಭರ್ಜರಿ ಜಯ ತಂದಿಟ್ಟಿತ್ತು. ಕೊಹ್ಲಿ ಮತ್ತು ರೋಹಿತ್ ದಾಖಲೆಯ ಜೊತೆಯಾಟವಾಡಿದ್ದರು.
ಒಬ್ಬರಿಗಿಂತ ಒಬ್ಬರು ಮೇಲೆ ಎನ್ನುವಂತೆ ಬೌಂಡರಿ ಸಿಕ್ಸರ್ ಗಳ ಮೂಲಕ ಭಾರತ ರನ್ ವೇಗ ಹೆಚ್ಚಿಸಿದ್ದರು. ಇನ್ನಿಂಗ್ಸ್ ನಡುವೆ ರೋಹಿತ್ ಸಿಡಿಸಿದ ಭರ್ಜರಿ ಬೌಂಡರಿಗೆ ಕೊಹ್ಲಿ ಅವಕ್ಕಾದ ಘಟನೆ ಕೂಡ ನಡೆಯಿತು. ರೋಹಿತ್ ಎದುರಾಳಿ ಎಸೆತವನ್ನು ಭರ್ಜರಿಯಾಗಿ ಫ್ಲಿಕ್ ಮಾಡಿ ಬೌಂಡರಿ ಗಿಟ್ಟಿಸಿದ್ದರು. ಈ ಬೌಂಡರಿಗೆ ಸ್ವತಃ ಕೊಹ್ಲಿ ಫಿದಾ ಆಗಿದ್ದು, ಕ್ರೀಸ್ ನಲ್ಲೇ ಶಾಕ್ ಗೆೊಳಗಾದ ವಿಡಿಯೋ ಇದೀಗ ವೈರಲ್ ಆಗಿದೆ.
ಮೈದಾನದಲ್ಲಿ ಕೆರಿಬಿಯನ್ ಬೌಲರ್ಗಳನ್ನ ಹಿಗ್ಗಾಮುಗ್ಗಾ ಥಳಿಸಿರುವ ರೋಹಿತ್ ಶರ್ಮಾ ಮೈದಾನದ ಎಲ್ಲ ಕಡೆ ಸಿಕ್ಸರ್-ಬೌಂಡರಿ ಸಿಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅಜೇಯ 152ರನ್ಗಳಿಕೆ ಮಾಡಿರುವ ರೋಹಿತ್ ಶರ್ಮಾ ಕೆಲವೊಂದು ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.