ವಿಶಾಖಪಟ್ಟಣ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ.
ನಾಯಕ ವಿರಾಟ್ ಕೊಹ್ಲಿ 129 ಎಸೆತಗಳಲ್ಲಿ 157 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟ್ ನಿಂದ 37ನೇ ಏಕದಿನ ಶತಕ ದಾಖಲಿಸಿದ್ದಾರೆ. ಅಲ್ಲದೆ ಅವರು ಅತಿ ವೇಗವಾಗಿ 10,000 ರನ್ ಪೂರೈಸಿದ ದಾಖಲೆಯನ್ನೂ ಬರೆದಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಇನ್ನುಳಿದಂತೆ ಭಾರತ ಪರವಾಗಿ ಅಂಬಟಿ ರಾಯುಡು ಅರ್ಧ ಶತಕ (73), ಶಿಖರ್ ಧವನ್ (30) ಎಂ.ಎಸ್. ಧೋನಿ 20 ರನ್ ಗಳಿಸಿದ್ದಾರೆ.
ಭಾರತ: 50 ಓವರ್ ಗಳಲ್ಲಿ 321/6
ವಿರಾಟ್ ಕೊಹ್ಲಿ 157 ರನ್ ನಾಟೌಟ್; ಎಆರ್ ನರ್ಸ್ 2/46).