ಟೀಂ ಇಂಡಿಯಾ, ವೆಸ್ಟ್ ಇಂಡೀಸ್ 
ಕ್ರಿಕೆಟ್

ಕ್ಷಣ ಕ್ಷಣಕ್ಕೂ ರೋಚಕ: ಕುತೂಹಲ ಕೆರಳಿಸಿದ್ದ ಭಾರತ-ವಿಂಡೀಸ್ ಪಂದ್ಯದ ಕೊನೆಯ ಓವರ್, ವಿಡಿಯೋ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಆದರೆ ಅಂಬಟ್ಟಿ ರಾಯುಡು ಕೈಗೆ ಸಿಕ್ಕ ಚೆಂಡನ್ನು ಬೌಂಡರಿಗೆ ಬಿಡದಿದ್ದರೆ ಪಂದ್ಯವನ್ನು ಟೀಂ ಇಂಡಿಯಾ...

ವಿಶಾಖಪಟ್ಟಣಂ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಆದರೆ ಅಂಬಟ್ಟಿ ರಾಯುಡು ಕೈಗೆ ಸಿಕ್ಕ ಚೆಂಡನ್ನು ಬೌಂಡರಿಗೆ ಬಿಡದಿದ್ದರೆ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಬಹುದಿತ್ತು. 
ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಪೇರಿಸಿದ್ದರು. ಭಾರತ ನೀಡಿದ 322 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಪಂದ್ಯವನ್ನು ಗೆಲ್ಲಲು ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಈ ವೇಳೆ ಉಮೇಶ್ ಯಾದವ್ ಬೌಲಿಂಗ್ ಮಾಡಿದ್ದರು. 
ಉಮೇಶ್ ಯಾದವ್ ತಮ್ಮ ಓವರ್ ನ ಮೊದಲ ಎಸೆತದಲ್ಲಿ 1 ರನ್ ನೀಡಿದರು. ನಂತರ 2ನೇ ಎಸೆತ ನರ್ಸ್ ಪ್ಯಾಡ್ಸ್ ಗೆ ಬಿದ್ದು ಬೌಂಡರಿಗೆ ಹೋಯಿತು. 3ನೇ ಎಸೆತದಲ್ಲಿ ನರ್ಸ್ 2 ರನ್ ತೆಗೆದುಕೊಂಡರು. 4ನೇ ಎಸೆತದಲ್ಲಿ ನರ್ಸ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಈ ವೇಳೆ ನಾನ್-ಸ್ಟ್ರೈಕ್ ನಿಂದ ಸ್ಟ್ರೈಕ್ ಗೆ ಬಂದ ಹೋಲ್ 5ನೇ ಎಸೆತದಲ್ಲಿ 2 ರನ್ ಪಡೆದರು. ಇನ್ನು ಪಂದ್ಯ ಗೆಲ್ಲಲು ವೆಸ್ಟ್ ಇಂಡೀಸ್ ಗೆ ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ ಬೇಕಿತ್ತು. ಹೀಗಾಗಿ ಹೋಪ್ ಸಿಕ್ಸರ್ ಸಿಡಿಸುವ ದಾವಾಂತದಲ್ಲಿದ್ದರು. ಆದರೆ ಉಮೇಶ್ ಯಾದವ್ ಆಫ್ ಸೈಡ್ ನಲ್ಲಿ ಚೆಂಡನ್ನು ಹಾಕಿದ್ದು ಹೋಪ್ ಚೆಂಡನ್ನು ಬಿರುಸಾಗಿ ಹೊಡೆದರು. ಚೆಂಡು ಆಫ್ ಸೈಡ್ ನಲ್ಲಿ ಬೌಂಡರಿಯತ್ತ ಸಾಗಿತ್ತು ಈ ವೇಳೆ ಬೌಂಡರಿಯಲ್ಲಿದ್ದ ಅಂಬಟ್ಟಿ ರಾಯುಡು ಕೈಗೆ ಸಿಕ್ಕ ಚೆಂಡನ್ನು ಬಿಟ್ಟರು ಚೆಂಡೂ ಬೌಂಡರಿ ಗೆರೆ ಸೇರಿತು. ಒಟ್ಟಿನಲ್ಲಿ ಇಬ್ಬರಿಗೂ ಗೆಲ್ಲುವ ಅವಕಾಶವಿತ್ತು ಆದರೆ ಪಂದ್ಯ ಟೈನಲ್ಲಿ ಅಂತ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!