ವಿಶಾಖಪಟ್ಟಣಂ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ.
ಹೌದು.. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಎಂಎಸ್ ಧೋನಿ ಆಡುತ್ತಿದ್ದರು. ಈ ವೇಳೆ ಸ್ಯಾಮೂವೆಲ್ಸ್ ಬೌಲಿಂಗ್ ನಲ್ಲಿ ಧೋನಿ ಹೆಲಿಕಾಫ್ಟರ್ ಶಾಟ್ ಹೊಡೆದರು. ಇನ್ನು ನಾನ್ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಧೋನಿಯ ಹೆಲಿಕಾಫ್ಟರ್ ಶಾಟ್ ಕಂಡು ದಂಗಾದರು.
ಎಂಎಸ್ ಧೋನಿ ತಮ್ಮ ಹಿಂದಿನ ಬ್ಯಾಟಿಂಗ್ ಶೈಲಿಯನ್ನು ಕಳೆದುಕೊಂಡಿದ್ದಾರೆ. ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಳ್ಳಲು ತಿಣುಕಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು.
ಎರಡನೇ ಏಕದಿನ ಪಂದ್ಯ ಟೈ ಆಗಿದ್ದು ಟೀಂ ಇಂಡಿಯಾ ನೀಡಿದ 321 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 321 ರನ್ ಬಾರಿಸಿದ್ದು ಪಂದ್ಯ ರೋಚಕ ಟೈ ಆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics