ಸಂಗ್ರಹ ಚಿತ್ರ 
ಕ್ರಿಕೆಟ್

ಈ ವೇಗದಲ್ಲಿ ಕೊಹ್ಲಿ ಶತಕ ಬಾರಿಸುತ್ತಿದ್ದರೆ ಸಚಿನ್ ದಾಖಲೆ ಮುರಿಯುವುದು ಯಾವಾಗ?

ಇದೀಗ ಕೊಹ್ಲಿ ಸಚಿನ್ ರ ಮತ್ತೊಂದು ಮಹತ್ವದ ದಾಖಲೆ ಹಿಂದೆ ಬಿದ್ದಿದ್ದು, ಇದೇ ವೇಗದಲ್ಲಿ ಅವರ ಬ್ಯಾಟ್ ಅಬ್ಬರಿಸುತ್ತಿದ್ದರೆ ಆ ದಾಖಲೆ ಮುರಿಯುವುದು ಕೂಡ ಕಷ್ಟವೇನೂ ಅಲ್ಲ.

ನವದೆಹಲಿ: ಯಶಸ್ಸಿನ ಉತ್ತುಂಗದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳ ಹಿಂದೆ ಬಿದ್ದಿದ್ದಾರೆ ಎನಿಸುತ್ತಿದೆ. ಈ ಹಿಂದೆ ಸಚಿನ್ ರ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದ ಕೊಹ್ಲಿ ಇತ್ತೀಚೆಗಷ್ಟೇ ಸಚಿನ್ 10, 000 ರನ್ ಗಳ  ದಾಖಲೆಯನ್ನು ಮುರಿದಿದ್ದರು. ಇದೀಗ ಕೊಹ್ಲಿ ಸಚಿನ್ ರ ಮತ್ತೊಂದು ಮಹತ್ವದ ದಾಖಲೆ ಹಿಂದೆ ಬಿದ್ದಿದ್ದು, ಇದೇ ವೇಗದಲ್ಲಿ ಅವರ ಬ್ಯಾಟ್ ಅಬ್ಬರಿಸುತ್ತಿದ್ದರೆ ಆ ದಾಖಲೆ ಮುರಿಯುವುದು ಕೂಡ ಕಷ್ಟವೇನೂ ಅಲ್ಲ.
ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆಧುನಿಕ ಕ್ರಿಕೆಟ್ ನ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಓರ್ವ ಎಂಬ ಕೀರ್ತಿಗೆ ಭಾಜನರಾಗಿರುವ ಭಾರತದ ರನ್​ ಮಷಿನ್​ ವಿರಾಟ್ ಕೊಹ್ಲಿ ಇದೇ ರೀತಿಯಾಗಿ ಬ್ಯಾಟ್​ ಬೀಸಿದರೆ ಖಂಡಿತವಾಗಿ ಅವರು ಸಚಿನ್ ರ ಮತ್ತೊಂದು ಮೈಲುಗಲ್ಲನ್ನು ಶೀಘ್ರ ಮುರಿಯಲಿದ್ದಾರೆ.
ಅತ್ತ ವಿಶಾಖಪಟ್ಟಣದಲ್ಲಿ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದ 10, 000 ರನ್ ಪೂರೈಸುತ್ತಿದ್ದಂತೆಯೇ ಕೊಹ್ಲಿ ಸಚಿನ್ ರ ದಾಖಲೆ ಮುರಿಯುವುದಕ್ಕೆ ಇನ್ನೆಷ್ಟು ಪಂದ್ಯಗಳಾಡಬೇಕು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಅಲ್ಲದೆ ಕೊಹ್ಲಿ ಮತ್ತು ಸಚಿನ್ ರ ಬ್ಯಾಟಿಂಗ್ ಕುರಿತಂತೆ ಸಾಮ್ಯತೆಯನ್ನೂ ಕೂಡ ಲೆಕ್ಕಾಚಾರ ಹಾಕಲಾಗುತ್ತಿದ್ದು, ಒಂದು ಲೆಕ್ಕಾಚಾರದಂತೆ ಸಚಿನ್ ಗಿಂತ ಕೊಹ್ಲಿ ಬ್ಯಾಟಿಂಗ್ ಸರಾಸರಿ ಉತ್ತಮವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕೆಲ ಅಂಕಿ ಅಂಶಗಳೂ ಕೂಡ ಸಾಥ್ ನೀಡುತ್ತಿದ್ದು, ಸಚಿನ್ ಗಿಂತ ಕೊಹ್ಲಿ ಬ್ಯಾಟಿಂಗ್ ಉತ್ತಮ ಎನ್ನುವುದಕ್ಕೆ ಇಲ್ಲಿ ಒಂದಷ್ಟು ಅಂಕಿ ಅಂಶವಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಟ್ಟು 463 ಪಂದ್ಯಗಳನ್ನಾಡಿದ್ದು, ಈ ಪೈಕಿ 452 ಇನ್ನಿಂಗ್ಸ್ ಗಳಲ್ಲಿ ಒಟ್ಟು 18,426 ರನ್ ಗಳನ್ನು ಪೇರಿಸಿದ್ದಾರೆ. ಈ ಪೈಕಿ 49 ಶತಕಗಳೂ ಕೂಡ ಸೇರಿದ್ದು, ಸಚಿನ್ ತಮ್ಮ ಒಟ್ಟಾರೆ ಇನ್ನಿಂಗ್ಸ್ ಗಳಲ್ಲಿ ಪ್ರತೀ ಶತಕಕ್ಕೆ ತೆಗೆದುಕೊಂಡಿರುವುದು ಸರಾಸರಿ 9.22 ಇನ್ನಿಂಗ್ಸ್ ಗಳನ್ನು. ಇದೇ ಲೆಕ್ಕಾಚಾರವನ್ನು ಕೊಹ್ಲಿಗೆ ಅನ್ವಯಿಸಿ ನೋಡುವುದಾದರೆ, ರನ್ ಮೆಷಿನ್ ವಿರಾಟ್ ಕೊಹ್ಲಿ ಒಟ್ಟು 213 ಪಂದ್ಯಗಳ ಪೈಕಿ ಒಟ್ಟು 205 ಇನ್ನಿಂಗ್ಸ್ ಗಳನ್ನಾಡಿದ್ದು, ಈ ಪೈಕಿ 10,076 ರನ್ ಗಳನ್ನು ಪೇರಿಸಿದ್ದಾರೆ. ಈ ಪೈಕಿ ಈಗಾಗಲೇ ಕೊಹ್ಲಿ 37 ಶತಕ ಸಿಡಿಸಿದ್ದು, ಅದರಂತೆ ಕೊಹ್ಲಿ ಸರಾಸರಿ ಪ್ರತೀ 5.54 ಇನ್ನಿಂಗ್ಸ್ ಗೆ ಒಂದರಂತೆ ಶತಕ ಸಿಡಿಸಿದ್ದಾರೆ. ಆ ಮೂಲಕ ಸಚಿನ್ ಏಕದಿನದಲ್ಲಿ ಸಿಡಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಇನ್ನು 12 ಶತಕಗಳಷ್ಟೇ ಬಾಕಿ ಇದೆ. ಅವರ ಶತಕಗಳ ಸರಾಸರಿಯನ್ನು ಗಮನಿಸಿದರೆ, ಕೊಹ್ಲಿಗೆ ಈ ದಾಖಲೆ ಮುರಿಯಲು ಕೇವಲ 65 ರಿಂದ 70 ಇನ್ನಿಂಗ್ಸ್ ಗಳ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.
ಒಂದು ವೇಳೆ ಕೊಹ್ಲಿ ಇದೇ ವೇಗದಲ್ಲಿ ಶತಕಗಳ ಸಿಡಿಸಿದರೆ ಏಕದಿನದಲ್ಲಿ ಸಚಿನ್ ರ ದಾಖಲೆಯನ್ನು ಖಂಡಿತಾ ಸರಿಗಟ್ಟುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT