ದುಬೈ: ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರು ಸರಿಯಾಗಿ ಅರ್ಧ ಶತಕದ ಹಿಂದೆ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಂದೇ ಓವರ್'ನಲ್ಲಿ ಆರು ಸಿಕ್ಸರ್ ಬಾರಿಸಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
50 ವರ್ಷಗಳ ಹಿಂದೆ, 1968ರಲ್ಲಿ ಸರ್ ಗ್ಯಾಲಿಫೀಲ್ಡ್ ಅವರು, ಸ್ವಾನ್ಸೀಯಲ್ಲಿ ನಡೆದ ಇಂಗ್ಲಿಷ್ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಗ್ಲಾಮೊರ್ಗಾನ್ ವಿರುದ್ಧ ಸತತ ಆರು ಎಸೆತೆಗಳಲ್ಲಿ ಆರು ಸಿಕ್ಸ್ ಸಿಡಿಸಿದ್ದರು.
ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದ ಎಡಗೈ ಬೌಲರ್ ಮಾಲ್ಕಮ್ ನ್ಯಾಶ್ ಎಸೆದ ಎಲ್ಲಾ ಚೆಂಡನ್ನು ಸರ್ ಗ್ಯಾರಿಫೀಲ್ಡ್ ಅವರು ಬೌಂಡರಿಗೆ ಅಟ್ಟಿದ್ದರು.
ಮಾಲ್ಕಮ್ ನ್ಯಾಶ್ ಗೆ ಆತನ ಕ್ಯಾಪ್ಟನ್ ರನ್ ನಿಯಂತ್ರಿಸಲು ಸ್ಪಿನ್ ಹಾಕುವಂತೆ ಸೂಚಿಸಿದ್ದರು. ಆದರೆ ದುರಾದೃಷ್ಟವಶಾತ್ ಆ ಸ್ಪಿನ್ ಬ್ಯಾಕ್ ಫೈರ್ ಆಗಿತ್ತು.
ಸರ್ ಗ್ಯಾರಿಫೀಲ್ಡ್ ಅವರ ಐತಿಹಾಸಿಕ ದಾಖಲೆಯ ಹೊರತಾಗಿಯೂ ನ್ಯಾಶ್ ಅವರು ಆ ಇನ್ನಿಂಗ್ಸ್ ನಲ್ಲಿ ನಿಜಕ್ಕೂ ಉತ್ತಮ ಬೌಲಿಂಗ್ ಮಾಡಿದ್ದರು ಎಂದು ಶುಕ್ರವಾರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತಿಳಿಸಿದೆ.
ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಅವರು ಆರು ಸಿಕ್ಸ್ ಸಿಡಿಸಿದ ವೇಳೆ ನಾಂಟಿಂಗ್ ಹ್ಯಾಮ್ ತಂಡದ ನಾಯಕರಾಗಿದ್ದರು.