ಲಂಡನ್: ಓವಲ್ ನಲ್ಲಿ ನಡೆಯಲಿರುವ ಭಾರತದ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ ಮನ್ ಅಲೈಸ್ಟರ್ ಕುಕ್ ಅಂತರಾಷ್ಟ್ರಿಯ ಕ್ರಿಕೆಟ್ ನಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ.
ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಟೆಸ್ಟ್ ರನ್ ಗಳನ್ನು ಗಳಿಸಿರುವ ಕುಕ್ (ಪ್ರಸ್ತುತ 12,254) 161 ಟೆಸ್ಟ್ ಗಲನ್ನು ಯಶಸ್ವಿಗೊಳಿಸಿದ್ದಾರೆ.
ಇತ್ತೀಚೆಗೆ ಅವರು ಕಳಪೆ ಫಾರ್ಮ್ ನಲ್ಲಿದ್ದ ಕಾರಣ ತಂಡದಲ್ಲಿ ಅವರ ಸ್ಥಾನ ತಪ್ಪಿ ಹೋಗುವ ಸಾಧ್ಯತೆಯೂ ಗೋಚರಿಸಿತ್ತು. ಇದೀಗ ತಾವೇ ನಿವೃತ್ತಿ ಘೋಷಿಸಿರುವ ಕುಕ್ ಮುಂದೆಯೂ ಎಸೆಕ್ಸ್ ಕ್ಲಬ್ ನಲ್ಲಿ ಆಡುವುದಾಗಿ ಹೇಳಿದ್ದಾರೆ.
"ಕಳೆದ ಕೆಲವು ತಿಂಗಳುಗಳಲ್ಲಿ ನಡೆಸಿದ ಚಿಂತನೆ, ಚರ್ಚೆಗಳ ಬಳಿಕ ಭಾರತ ವಿರುದ್ಧ ಈ ಟೆಸ್ಟ್ ಸರಣಿಯ ಕೊನೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇವೆ," ಕುಕ್ ಹೇಳಿದ್ದಾರೆ.
"ನನ್ನ ನಾಡಿಗೆ ಣಾನೆಲ್ಲವನ್ನೂ ನೀಡಿದ್ದೇನೆ. ನನಗೆ ತೃಪ್ತಿ ಇದೆ.ನನ್ನ ಕಲ್ಪನೆಗಿಂತ ಹೆಚ್ಚೇ ಸಾಧಿಸಿದ್ದೇನೆ.ಈಗ ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಸರಿಯಾದ ಸಮಯವಾಗಿದೆ."
33 ವರ್ಷದವ ಕುಕ್ ಚಳಿಗಾಲದ ಆಶಸ್ ಸರಣಿಯಲ್ಲಿ ಸ್ಮರಣೀಯ ದ್ವಿಶತಕಗಳನ್ನು ಗಳಿಸಿ ಸಾಧನೆ ಮೆರೆದಿದರು. ಇದಲ್ಲದೆ ಎಡ್ಗ್ಬಾಸ್ಟನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಸಹ ದ್ವಿಶತಕ ಸಿಡಿಸಿ ಮಿಂಚಿದ್ದರು.
ಅಲೈಸ್ಟರ್ ಕುಕ್ ಒಟ್ಟು 160 ಟೆಸ್ಟ್ ಗಳಿಂದ 44.88ರ ಸರಾಸರಿಯಲ್ಲಿ 12,254 ರನ್ ಗಳಿಸಿಕೊಂಡಿದ್ದಾರೆ.
ಇವರು ಒಟ್ಟು 32 ಟೆಸ್ಟ್ ಶತಕಗಳನ್ನು ಸಿಡಿಸಿದ್ದು 11 ಟೆಸ್ಟ್ ಗಳಲ್ಲಿ 150 ರನ್ ಗಳನ್ನು ಸಿಡಿಸಿದ್ದರು.ಇಂಗ್ಲೆಂಡ್ ಟೆಸ್ಟ್ ನಾಯಕನಾಗಿ 59 ಟೆಸ್ಟ್ ಪಂದ್ಯಗಳನ್ನು ಇವರು ಆಡಿದ್ದಾರೆ.ಅಲ್ಲದೆ ಇವರು 173ಕ್ಯಾಚ್ ಹಿಡಿದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos