ನಿಮ್ರತ್ ಕೌರ್-ರವಿಶಾಸ್ತ್ರಿ 
ಕ್ರಿಕೆಟ್

ಬಾಲಿವುಡ್ ನಟಿಯೊಂದಿಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಡೇಟಿಂಗ್, ಇದಕ್ಕೆ ನಟಿ ಹೇಳಿದ್ದೇನು!

ಟೀಂ ಇಂಡಿಯಾ ಆಟಗಾರರು ಬಾಲಿವುಡ್ ನಟಿಯರೊಂದಿಗೆ ಡೇಟಿಂಗ್ ನಡೆಸುವುದು ಸಾಮಾನ್ಯ. ಆದರೆ ಸದ್ಯ ಟೀಂ ಇಂಡಿಯಾದ ಪ್ರಧಾನ ಕೋಚ್ ರವಿಶಾಸ್ತ್ರಿ...

ಮುಂಬೈ: ಟೀಂ ಇಂಡಿಯಾ ಆಟಗಾರರು ಬಾಲಿವುಡ್ ನಟಿಯರೊಂದಿಗೆ ಡೇಟಿಂಗ್ ನಡೆಸುವುದು ಸಾಮಾನ್ಯ. ಆದರೆ ಸದ್ಯ ಟೀಂ ಇಂಡಿಯಾದ ಪ್ರಧಾನ ಕೋಚ್ ರವಿಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಕೌರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 
ನಿಮ್ರತ್ ಕೌರ್ ಒನ್ ನೈಟ್ ವಿಥ್ ದಿ ಕಿಂಗ್, ಏರ್ ಲಿಫ್ಟ್ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೇ ಜಾಕಲೇಟ್ ಜಾಹೀರಾತಿನಲ್ಲಿ ನಟಿಸಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ಆದರೆ ಇದೀಗ 36ರ ಹರೆಯದ ನಿಮ್ರತ್ ಕೌರ್ ರವಿಶಾಸ್ತ್ರಿ ಜತೆ ಕಳೆದ 2 ವರ್ಷಗಳಿಂದ ಗೌಪ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಇನ್ನು ರವಿಶಾಸ್ತ್ರಿ ಜತೆಗಿನ ಡೇಟಿಂಗ್ ಸುದ್ದಿ ಕುರಿತಂತೆ ಪ್ರತಿಕ್ರಿಯಿಸಿರುವ ನಟಿ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾರೊಂದಿಗೂ ಡೇಟಿಂಗ್ ನಡೆಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 
ರವಿಶಾಸ್ತ್ರಿ ಅವರಿಗೆ 56 ವರ್ಷ ವಯಸ್ಸಾಗಿದ್ದು ರಿತೂ ಸಿಂಗ್ ಜತೆ ವಿವಾಹವಾಗಿದ್ದರು. ಇನ್ನು 1990ರಲ್ಲೇ ಪತ್ನಿಯಿಂದ ದೂರವಾಗಿದ್ದ ರವಿಶಾಸ್ತ್ರಿ 30 ವರ್ಷದ ಹಿಂದೆ ನಟಿ ಅಮೃತ ಸಿಂಗ್ ಜತೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. 
ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಹೀನಾಯ ಪ್ರದರ್ಶನ ನೀಡುತ್ತಿದೆ. ಅದಾಗಲೇ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಯನ್ನು ಕೈಚೆಲ್ಲಿದ್ದು ಈ ಮಧ್ಯೆ ಕೋಚ್ ರವಿಶಾಸ್ತ್ರಿ ಡೇಟಿಂಗ್ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 16 ಮಂದಿ ಸಾವು; ಸೇನೆ ನಿಯೋಜನೆ; Video!

ಅಕ್ರಮ ಬೆಟ್ಟಿಂಗ್ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 14 ದಿನ ನ್ಯಾಯಾಂಗ ಬಂಧನ

ಆಸ್ತಿಗಾಗಿ ತಂದೆಯ ಹತ್ಯೆ: ಮೃತದೇಹದ ಪಕ್ಕದಲ್ಲೇ ರಾತ್ರಿ ಕಳೆದ ಮಗ!

Couple Romance: ರೈಲಿನಲ್ಲಿ ಜನರ ಎದುರೆ ತಬ್ಬಿಕೊಂಡು ಚುಂಬಿಸಿ ಯುವ ಜೋಡಿ 'ರಾಸಲೀಲೆ'; ಮುಜುಗರಕ್ಕೀಡಾದ ಪ್ರಯಾಣಿಕರು, Video!

ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ: 3 ದಿನ ರಾಜ್ಯಾದ್ಯಂತ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

SCROLL FOR NEXT